ಹೊಸದಿಲ್ಲಿಗೆ ಐಪಿಎಲ್ ಟ್ರೋಫಿ

Update: 2016-03-25 18:28 GMT

ಹೊಸದಿಲ್ಲಿ, ಮಾ.25: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟ್ರೋಫಿ ಮಾ.27 ರಂದು ಹೊಸದಿಲ್ಲಿಗೆ ತಲುಪಲಿದೆ. ಪುಣೆ, ಹೈದರಾಬಾದ್ ಹಾಗೂ ರಾಯ್‌ಪುರ ನಗರಗಳಿಗೆ ಪ್ರದಕ್ಷಿಣೆ ಮಾಡಿರುವ ಐಪಿಎಲ್ ಟ್ರೋಫಿ ರವಿವಾರ ನಗರಕ್ಕೆ ಆಗಮಿಸಲಿದ್ದು, ಕ್ರಿಕೆಟ್ ಅಭಿಮಾನಿಗಳ ವೀಕ್ಷಣೆಗೆ ಇಡಲಾಗುತ್ತದೆ.

ಹೊಸದಿಲ್ಲಿಯಲ್ಲಿ ಪ್ರದಕ್ಷಿಣೆ ಮಾಡಿದ ಬಳಿಕ ಟ್ರೋಫಿಯು ಕೋಲ್ಕತಾ ಹಾಗೂ ಮುಂಬೈಗೆ ತೆರಳಲಿದೆ. ಅಭಿಮಾನಿಗಳಿಗೆ ಟ್ರೋಫಿಯೊಂದಿಗೆ ವಿಶೇಷ ಕ್ಷಣ ಕಳೆಯುವ ಅವಕಾಶ ಕಲ್ಪಿಸಲು ನಗರದ ಮಾಲ್‌ಗಳಲ್ಲಿ ವಿಶೇಷವಾದ ಪಾರ್ಕ್ ನಿರ್ಮಿಸಿ ಟ್ರೋಫಿಯನ್ನು ಇಡಲಾಗುತ್ತಿದೆ. ಈ ವೇಳೆ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದ್ದು ವಿಜೇತರಿಗೆ ಐಪಿಎಲ್ ಪ್ರಾಯೋಜಕರು ಬಹುಮಾನ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News