ವಿಶ್ವಕಪ್: ಬಾಂಗ್ಲಾದೇಶದ ವಿರುದ್ಧ ನ್ಯೂಝಿಲೆಂಡ್ 145/8
ಕೋಲ್ಕತಾ, ಮಾ.26: ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್(5-22) ಅತ್ಯುತ್ತಮ ಬೌಲಿಂಗ್‌ನ ಹೊರತಾಗಿಯೂ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ನ ಸೂಪರ್ 10 ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 145 ರನ್ ಗಳಿಸಿದೆ.
ಶನಿವಾರ ಇಲ್ಲಿನ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಗ್ರೂಪ್-2ರ ಪಂದ್ಯದಲ್ಲಿ ಟಾಸ್ ಜಯಿಸಿದ ನ್ಯೂಝಿಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಬಾಂಗ್ಲಾದೇಶದ ಯುವ ವೇಗದ ಬೌಲರ್ ಮುಸ್ತಫಿಝುರ್ರಹ್ಮಾನ್ ಅವರು 5 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಕಿವೀಸ್‌ನ ಆರಂಭಿಕ ದಾಂಡಿಗರಾದ ನಿಕೊಲ್ಸ್(7), ನಾಯಕ ವಿಲಿಯಮ್ಸನ್(42), ಎಲಿಯಟ್(09)ಸ್ಯಾಂಟರ್(3), ಹಾಗೂ ನಥನ್ ಮೆಕಲಮ್(0) ಅವರುಗಳು ರಹ್ಮಾನ್ ದಾಳಿಗೆ ನಿರುತ್ತರರಾದರು.
ಕಿವೀಸ್‌ನ ಪರ ನಾಯಕ ವಿಲಿಯಮ್ಸನ್(42 ರನ್, 32 ಎಸೆತ, 5 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು. ಮುನ್ರೊ(35) ಹಾಗೂ ರಾಸ್ ಟೇಲರ್(28) ಎರಡಂಕೆಯ ಸ್ಕೋರ್ ದಾಖಲಿಸಿದರು. ಬಾಂಗ್ಲಾದ ಪರ ಅಲ್-ಅಮೀನ್ ಹುಸೈನ್(2-27) 2 ವಿಕೆಟ್ ಪಡೆದಿದ್ದರು.