×
Ad

ವಿಶ್ವಕಪ್: ವಿಂಡೀಸ್ ವಿರುದ್ಧ ಅಫ್ಘಾನಿಸ್ತಾನ 123/7

Update: 2016-03-27 17:04 IST

ನಾಗ್ಪುರ, ಮಾ.27: ವೆಸ್ಟ್‌ಇಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬದ್ರಿ(3-14) ಹಾಗೂ ವೇಗದ ಬೌಲರ್ ಆ್ಯಂಡ್ರೆ ರಸ್ಸಲ್(2-23) ದಾಳಿಗೆ ಸಿಲುಕಿದ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ನ ಸೂಪರ್ 10ರ ತನ್ನ ಕೊನೆಯ ಪಂದ್ಯದಲ್ಲಿ ಕೇವಲ 123 ರನ್ ಗಳಿಸಿದೆ.

ರವಿವಾರ ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ವಿಂಡೀಸ್ ತಂಡ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕೆಳ ಕ್ರಮಾಂಕದಲ್ಲಿ ಔಟಾಗದೆ 48 ರನ್(40 ಎಸೆತ, 4 ಬೌಂಡರಿ, 1 ಸಿಕ್ಸರ್) ಗಳಿಸಿದ ನಜೀಬುಲ್ಲಾ ಝದ್ರಾನ್ ಅಫ್ಘಾನ್ ತಂಡದ ಸ್ಕೋರ್‌ನ್ನು 120ರ ಗಡಿ ದಾಟಿಸಿದರು.

 ಅಫ್ಘಾನ್ ಪರ ಆರಂಭಿಕ ದಾಂಡಿಗ ಮುಹಮ್ಮದ್ ಶೆಹಝಾದ್(24), ನಾಯಕ ಅಸ್ಘರ್ ಸ್ಟಾನಿಕ್‌ಝೈ(16) ಎರಡಂಕೆ ಸ್ಕೋರ್ ದಾಖಲಿಸಿದರು. ಈಗಾಗಲೇ ಗ್ರೂಪ್-1ರಲ್ಲಿ ಸತತ 3 ಪಂದ್ಯಗಳಲ್ಲಿ ಜಯ ಸಾಧಿಸಿರುವ ವೆಸ್ಟ್‌ಇಂಡೀಸ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಸಂಕ್ಷಿಪ್ತ ಸ್ಕೋರ್

ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 123/7

(ನಜೀಬುಲ್ಲಾ ಝದ್ರಾನ್ ಔಟಾಗದೆ 48, ಶಹಝಾದ್ 24, ಬದ್ರಿ 3-14, ರಸ್ಸಲ್ 2-23)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News