ವಿಶ್ವಕಪ್: ವಿಂಡೀಸ್‌ಗೆ ಅಫ್ಘಾನಿಸ್ತಾನ ಆಘಾತ
ಕೆರಿಬಿಯನ್ ಪಡೆಗೆ 6 ರನ್ ಸೋಲು
ನಾಗ್ಪುರ, ಮಾ.27: ಹ್ಯಾಟ್ರಿಕ್ ಗೆಲುವಿನ ಮೂಲಕ ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪಿರುವ ವೆಸ್ಟ್‌ಇಂಡೀಸ್ ತಂಡ ರವಿವಾರ ಇಲ್ಲಿ ನಡೆದ ತನ್ನ ಕೊನೆಯ ಸೂಪರ್-10 ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ದ ಆಘಾತಕಾರಿ ಸೋಲನುಭವಿಸಿದೆ.
ಗೆಲ್ಲಲು 124 ರನ್ ಸುಲಭ ಸವಾಲು ಪಡೆದಿದ್ದ ವಿಂಡೀಸ್ ತಂಡ ಅಫ್ಘಾನ್‌ನ ಕರಾರುವಾಕ್ ಬೌಲಿಂಗ್‌ಗೆ ತತ್ತರಿಸಿ 20 ಓವರ್‌ಗಳಲ್ಲಿ ಕೇವಲ 8 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿದ್ದು, 6 ರನ್ ಅಂತರದಿಂದ ಸೋತಿದೆ. ಪಾಕ್‌ನ ಮಾಜಿ ನಾಯಕ ಇಂಝಮಮ್ ಉಲ್ ಹಕ್ ಕೋಚಿಂಗ್‌ನಲ್ಲಿ ವಿಶ್ವಕಪ್‌ನಲ್ಲಿ ಬಲಿಷ್ಠ ತಂಡಗಳಿಗೆ ಬೆವರಿಳಿಸಿದ್ದ ಅಫ್ಘಾನ್ ರವಿವಾರ ತನ್ನ ಕೊನೆಯ ಪಂದ್ಯದಲ್ಲಿ ವಿಂಡೀಸ್‌ಗೆ ಸೋಲುಣಿಸಿ ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿತು.
ಸ್ಪಿನ್ನರ್ ರಶೀದ್ ಖಾನ್(2-26) ಹಾಗೂ ಮುಹಮ್ಮದ್ ನಬಿ(2-26) ತಲಾ 2 ವಿಕೆಟ್ ಪಡೆದು ಅಫ್ಘಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ವಿಂಡೀಸ್‌ನ ಪರ ಡ್ವೇಯ್ನಾ ಬ್ರಾವೊ 28 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಚಾರ್ಲ್ಸ್(22), ರಾಮ್ದೀನ್(18) ಹಾಗೂ ಬ್ರಾತ್‌ವೇಟ್(13) ಎರಡಂಕೆಯ ಸ್ಕೋರ್ ದಾಖಲಿಸಿದರು.
ಇದಕ್ಕೆ ಮೊದಲು ವೆಸ್ಟ್‌ಇಂಡೀಸ್ ಸ್ಪಿನ್ನರ್ ಸ್ಯಾಮುಯೆಲ್ ಬದ್ರಿ(3-14) ಹಾಗೂ ವೇಗದ ಬೌಲರ್ ಆ್ಯಂಡ್ರೆ ರಸ್ಸಲ್(2-23) ದಾಳಿಗೆ ಸಿಲುಕಿದ ಅಫ್ಘಾನಿಸ್ತಾನ ತಂಡ ವಿಶ್ವಕಪ್‌ನ ಸೂಪರ್ 10ರ ತನ್ನ ಕೊನೆಯ ಪಂದ್ಯದಲ್ಲಿ ಕೇವಲ 123 ರನ್ ಗಳಿಸಿತು. ರವಿವಾರ ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ವಿಂಡೀಸ್ ತಂಡ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ತಾನ: 20 ಓವರ್‌ಗಳಲ್ಲಿ 123/7
(ನಜೀಬುಲ್ಲಾ ಝದ್ರಾನ್ ಔಟಾಗದೆ 48, ಶಹಝಾದ್ 24, ಬದ್ರಿ 3-14, ರಸ್ಸಲ್ 2-23)
ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 117/8
(ಬ್ರಾವೊ 28, ಚಾರ್ಲ್ಸ್ 22, ರಾಮ್ದೀನ್ 18, ಮುಹಮ್ಮದ್ ನಬಿ 2-26, ರಶೀದ್ ಖಾನ್ 2-26)
ಪಂದ್ಯಶ್ರೇಷ್ಠ: ನಜೀಬುಲ್ಲಾ ಶೆನ್ವಾರಿ.