×
Ad

ಟ್ವೆಂಟಿ-20 ವಿಶ್ವಕಪ್: ಲಂಕಾವನ್ನು ಮಣಿಸಿದ ಆಫ್ರಿಕ

Update: 2016-03-28 21:11 IST

ಹೊಸದಿಲ್ಲಿ, ಮಾ.28: ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್ ರೇಸ್‌ನಿಂದ ಹೊರದಬ್ಬಲ್ಪಟ್ಟಿರುವ ದಕ್ಷಿಣ ಆಫ್ರಿಕ ತಂಡ ತನ್ನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂದು ಎಂಟು ವಿಕೆಟ್‌ಗಳ ಜಯ ಗಳಿಸಿದೆ.

121 ರನ್‌ಗಳ ಸವಾಲನ್ನು ಪಡೆದ ದಕ್ಷಿಣ ಆಫ್ರಿಕ ತಂಡ ಇನ್ನೂ ಹದಿನಾಲ್ಕು ಎಸೆತಗಳು ಬಾಕಿ ಇರುವಾಗಲೇ 2 ವಿಕೆಟ್‌ ನಷ್ಟದಲ್ಲಿ 122 ರನ್ ಗಳಿಸಿತು.
ಹಾಶಿಮ್‌ ಅಮ್ಲ ಔಟಾಗದೆ 56 ರನ್‌, ಎಫ್‌ಡು ಪ್ಲೆಸಿಸ್‌ 31 ರನ್‌, ಎಬಿ ಡಿವಿಲಿಯರ‍್ಸ್‌  20ರನ್‌ ಮತ್ತು ಕ್ವಿಂಟನ್‌ ಡಿ ಕಾಕ್‌ 9ರನ್‌ ಗಳಿಸಿ ಔಟಾದರು.

ಶ್ರೀಲಂಕಾ ತಂಡ 19.3  ಓವರ್‌ಗಳಲ್ಲಿ  120 ರನ್‌ಗಳಿಗೆ ಆಲೌಟಾಗಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ನಾಯಕ ದಿನೇಶ್ ಚಾಂಡಿಮಲ್ ಮತ್ತು ತಿಲಕರತ್ನೆ ದಿಲ್ಶನ್ ಮೊದಲ ವಿಕೆಟ್‌ಗೆ 4.5 ಓವರ್‌ಗಲ್ಲಿ 45 ರನ್ ಕಲೆ ಹಾಕಿದ್ದರು. ಚಾಂಡಿಮಾಲ್ 21 ರನ್(20ಎ, 2ಬೌ,1ಸಿ) ಗಳಿಸಿ ಫಾಂಗಿಸೊ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್‌ಗೆ ನಿರ್ಗಮಿಸಿದರು. ಬಳಿಕ ಲಂಕಾದ ಬ್ಯಾಟಿಂಗ್ ದುರ್ಬಲಗೊಂಡಿತು.
ಅದೇ ಓವರ್‌ನ ಕೊನೆಯ ಎಸೆತದಲ್ಲಿ ತಿರಿಮನ್ನೆ (0) ಖಾತೆ ತೆರೆಯದೆ ನಿರ್ಗಮಿಸಿದರು. ಸಿರಿವರ್ಧನೆ (15) ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ನಿಂತರು. 9.2ನೆ ಓವರ್‌ನಲ್ಲಿ ರನೌಟಾಗಿ ಪೆವಿಲಿಯನ್ ಸೇರಿದರು.
 ಡೇಲ್ ಸ್ಟೇಯ್ನ (33-1),  ಕೈಲ್ ಅಬಾಟ್ (2-14), ಫಾಂಗಿಸೊ(2-26), ಫರ್ಹಾನ್ ಬೆಹರ್ಡಿನ್ (2-15)ಮತ್ತು ಇಮ್ರಾನ್ ತಾಹಿರ್(1-18) ಲಂಕಾ ಹೆಚ್ಚು ರನ್ ಗಳಿಸದಂತೆ ಕಡಿವಾಣ ಹಾಕಿದರು.

ದಿಲ್ಶನ್ 36 ರನ್ (40ಎ, 4ಬೌ,1ಸಿ) ,ಜಯಸೂರ್ಯ (1), ಕಪುಗೆಡೆರ (4) ನಿರ್ಗಮಿಸಿದರು. ತಿಸ್ಸರಾ ಪೆರೆರಾ (8) , ರಂಗನ್ ಹೆರಾತ್(2) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ದಸುನ್ ಶನಕ ಔಟಾಗದೆ 20 ರನ್ , ಜೆಫ್ರಿ ವ್ಯಾಂಡರ್ಸೆ 3 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: 19.3 ಓವರ್‌ಗಳಲ್ಲಿ 120 ರನ್‌ಗೆ ಆಲೌಟ್

(ದಿಲ್ಶನ್ 36, ಚಾಂಡಿಮಾಲ್ 21, ಶನಕಾ ಔಟಾಗದೆ 20, ಸಿರಿವರ್ಧನ 15, ಅಬಾಟ್ 2-14, ಫಾಂಗಿಸೊ 2-26, ಬೆಹರ್ದಿನ್ 2-15, ಸ್ಟೇಯ್ನ 1-33, ತಾಹಿರ್ 1-18)

ದಕ್ಷಿಣ ಆಫ್ರಿಕ: 17.4 ಓವರ್‌ಗಳಲ್ಲಿ 122/2

(ಅಮ್ಲ ಔಟಾಗದೆ 56, ಪ್ಲೆಸಿಸ್ 31, ಎಬಿಡಿ ವಿಲಿಯರ್ಸ್ ಔಟಾಗದೆ 20, ಲಕ್ಮಲ್ 1-28)

ಪಂದ್ಯಶ್ರೇಷ್ಠ: ಆ್ಯರೊನ್ ಫಾಂಗಿಸೊ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News