ಈಜಿಪ್ಟ್ ಏರ್ ವಿಮಾನ ಅಪಹರಣ

Update: 2016-03-29 07:07 GMT

ಕೈರೋ, ಮಾ.29: ಇಲ್ಲಿನ ಅಲೆಗ್ಸಾಂಡರಿಯದಿಂದ ಕೈರೋಗೆ ಪ್ರಯಾಣಿಸುತ್ತಿದ್ದ ಈಜಿಪ್ಟ್ ಏರ್ ನಾಗರಿಕ ವಿಮಾನವನ್ನು ಮಂಗಳವಾರ ಅಪಹರಿಸಿ, ಸೈಪ್ರಸ್ ಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಈಜಿಪ್ಟ್ ನಾಗರಿಕ ವಿಮಾನ ಯಾನ ಸಚಿವಾಲಯ ಹಾಗೂ ಪೊಲೀಸರು ತಿಳಿಸಿದ್ದಾರೆ ಎಂದು ಅಲ್ ಅರೆಬಿಯಾ ವರದಿ ಮಾಡಿದೆ. 

ವಿಮಾನದಲ್ಲಿ 80 ಅಥವಾ 81 ಮಂದಿ ಇದ್ದರು. ಆ ಪೈಕಿ ಓರ್ವ ಸಶಸ್ತ್ರ ಗಳನ್ನು ಹೊಂದಿದ್ದ ಎಂದು ಸೈಪ್ರಸ್ ಸರಕಾರಿ ರೇಡಿಯೊ ವರದಿ ಮಾಡಿದೆ. 

ವಿಮಾನವು ಸೈಪ್ರಸ್ ನ ಲರ್ನಕ ದಲ್ಲಿ ಇಳಿದಿದೆ ಎಂದು ತಿಳಿದುಬಂದಿದೆ. 

ಅಪಹರಣದ ಕುರಿತ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News