ಟ್ವೆಂಟಿ-20 ವಿಶ್ವಕಪ್ ;ಇಂಗ್ಲೆಂಡ್ ಫೈನಲ್‌ಗೆ
ಹೊಸದಿಲ್ಲಿ, ಮಾ.30: ಆರನೆ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಅಜೇಯ ನ್ಯೂಝಿಲೆಂಡ್ ತಂಡವನ್ನು ಮಣಿಸಿದ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ.
ಇಲ್ಲಿನ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿದ ಇಂಗ್ಲೆಂಡ್ ಎರಡನೆ ಬಾರಿ ಫೈನಲ್ ಪ್ರವೇಶಿಸಿದೆ.
ಗೆಲುವಿಗೆ 154 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ನಷ್ಟದಲ್ಲಿ 159 ರನ್ ಗಳಿಸಿ ಸುಲಭದ ಜಯ ದಾಖಲಿಸಿತು.
ಇಂಗ್ಲೆಂಡ್‌ನ ಆರಂಭಿಕ ದಾಂಡಿಗ ಜೇಸನ್ ರಾಯ್ ವೇಗದ 78ರನ್(44ಎ, 11ಬೌ, 2ಸಿ) ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಲೆಕ್ಸ್ ಹೇಲ್ಸ್ 20 ರನ್(19ಎ, 1ಬೌ,1ಸಿ), ಜೋ ರೂಟ್ ಔಟಾಗದೆ 27 ರನ್(22ಎ, 3ಬೌ), ಜೋಶ್ ಬಟ್ಲರ್ ಔಟಾಗದೆ 32ರನ್(17ಎ,2ಬೌ,3ಸಿ) ಗಳಿಸಿ ದರು.
ಆರಂಭಿಕ ದಾಂಡಿಗರಾದ ರಾಯ್ ಮತ್ತು ಹೇಲ್ಸ್ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 82 ರನ್ ಸೇರಿಸುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟರು. ರಾಯ್ 26 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು.
16ನೆ ಓವರ್‌ನ ಮುಕ್ತಾಯಕ್ಕೆ ಇಂಗ್ಲೆಂಡ್ 24 ಎಸೆತಗಳಲ್ಲಿ 23 ರನ್ ಮಾಡಬೇಕಿತ್ತು. ಆದರೆ ಬಟ್ಲರ್ ಮತ್ತು ರೂಟ್ 7 ಎಸೆತಗಲ್ಲಿ 28 ರನ್ ಗಳಿಸಿದರು. 17ನೆ ಓವರ್‌ನಲ್ಲಿ ಸೋಧಿ ಅವರನ್ನು ದಂಡಿಸಿದ ಬಟ್ಲರ್ ಮತ್ತು ರೂಟ್2 ಬೌಂಡರಿ ಮತ್ತು 2 ಸಿಕ್ಸರ್ ಇರುವ 22 ರನ್ ಕಬಳಿಸಿದರು. ಸಾಂಟ್ನರ್ ಅವರ 18ನೆ ಓವರ್‌ನ ಮೊದಲ ಎಸೆತದಲ್ಲಿ ಬಟ್ಲರ್ ಅವರು ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಇಂಗ್ಲೆಂಡ್‌ನ ಗೆಲುವಿನ ರನ್ ಪೂರೈಸಿದರು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂದು ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಝಿಲೆಂಡ್ ತಂಡ ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್‌ರನ್ನು ಬೇಗನೆ ಕಳೆದುಕೊಂಡರೂ, ಎರಡನೆ ವಿಕೆಟ್‌ಗೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ಮುನ್ರೊ 74 ರನ್ ಸೇರಿಸಿದರು.
10.3ನೆ ಓವರ್‌ನಲ್ಲಿ ವಿಲಿಯಮ್ಸನ್ 32 ರನ್ ಗಳಿಸಿ ಮೊಯಿನ್ ಅಲಿಗೆ ರಿಟರ್ನ್ ಕ್ಯಾಚ್ ನೀಡಿ ನಿರ್ಗಮಿಸಿದರು.
ಮುನ್ರೊ 46 ರನ್(32ಎ, 7ಬೌ,1ಸಿ) ಗಳಿಸಿ ಔಟಾದರು. ಆಗ ತಂಡದ ಸ್ಕೋರ್ 13.2 ಕೋರಿ ಆ್ಯಂಡರ್ಸನ್ ಹೋರಾಟದ ಮೂಲಕ 28 ರನ್ ಗಳಿಸಿದರು. ರಾಸ್ ಟೇಲರ್ 6 ರನ್, ಗ್ರಾಂಟ್ ಎಲಿಯಟ್ ಔಟಾಗದೆ 4 ರನ್, ಲೂಕ್ ರೊಂಚಿ 3ರನ್, ಸಾಂಟ್ನರ್ 7 ರನ್, ಮೆಕ್ಲೀನಘನ್ 1 ರನ್ ಗಳಿಸಿದರು. ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ 26ಕ್ಕೆ 3 ವಿಕೆಟ್, ವಿಲ್ಲಿ, ಜೋರ್ಡನ್, ಪ್ಲಂಕೆಟ್ ಮತ್ತು ಮೊಯಿನ್ ಅಲಿ ತಲಾ 1 ವಿಕೆಟ್ ಪಡೆದರು.