×
Ad

ವೆಸ್ಟ್‌ಇಂಡಿಸ್ ಫೈನಲ್‌ಗೆ

Update: 2016-03-31 22:38 IST

ಮುಂಬೈ, ಮಾ.31: ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂದು ವೆಸ್ಟ್‌ಇಂಡಿಸ್ ತಂಡ ಭಾರತ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿ  ಫೈನಲ್ ಪ್ರವೇಶಿಸಿದೆ.

ವಿಂಡೀಸ್‌  ಮಾ.3ರಂದು ಕೋಲ್ಕತಾದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ.
ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 193 ರನ್‌ಗಳ ಕಠಿಣ ಸವಾಲನ್ನು ಪಡೆದಿದ್ದ ವೆಸ್ಟ್‌ಇಂಡೀಸ್ ನಿಗದಿತ 19.4ಓವರ್‌ಗಳಲ್ಲಿ 3ವಿಕೆಟ್ ನಷ್ಟದಲ್ಲಿ196 ರನ್ ಗಳಿಸಿತು. ಸಿಮನ್ಸ್ 83 ರನ್ ಮತ್ತು ರಸೆಲ್ಸ್43 ರನ್ ಗಳಿಸಿದರು.
  ವಿಂಡೀಸ್ ತಂಡದ ಕ್ರಿಸ್ ಗೇಲ್ (5) ಮತ್ತು ಮರ್ಲಾನ್ ಸ್ಯಾಮುಯೆಲ್ಸ್ (8) ಬೇಗನೆ ಔಟಾಗಿದ್ದರೂ, ಬಳಿಕ ಚಾರ್ಲ್ಸ್ ಮತ್ತು ಸಿಮನ್ಸ್ ಬ್ಯಾಟಿಂಗ್ ಮುಂದುವರಿಸಿ ಮೂರನೆ ವಿಕೆಟ್‌ಗೆ 10.1 ಓವರ್‌ಗಳಲ್ಲಿ 97 ರನ್ ಸೇರಿಸಿದರು. ಚಾರ್ಲ್ಸ್ 52 ರನ್(36ಎ, 7ಬೌ,2ಸಿ) ಗಳಿಸಿ ಕೊಹ್ಲಿಗೆ ವಿಕೆಟ್ ಒಪ್ಪಿಸಿದರು. ಸಿಮನ್ಸ್‌ಗೆ ಅಶ್ವಿನ್ ಅವರ 7ನೆ ಮತ್ತು ಪಾಂಡೆಯ 15ನೆ ಓವರ್‌ನಲ್ಲಿ ಜೀವದಾನ ಲಭಿಸಿತ್ತು.
ಭಾರತ 192/2: ಭಾರತ ನಿಗದಿತ 20 ಓವರ್‌ಗಳಲ್ಲಿ 2ವಿಕೆಟ್ ನಷ್ಟದಲ್ಲಿ 192ರನ್ ಗಳಿಸಿತ್ತು.
  ವಿರಾಟ್ ಕೊಹ್ಲಿ ಮತ್ತೊಮ್ಮೆ ಅರ್ಧಶತಕದ ಕೊಡುಗೆ ನೀಡಿದರು. ಅವರು ಔಟಾಗದೆ 89 ರನ್(47ಎ, 11ಬೌ,1ಸಿ) ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತಕ್ಕೆ ಮೊದಲ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ 7.2 ಓವರ್‌ಗಳಲ್ಲಿ 62 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಆರಂಭದಲ್ಲಿ ರೋಹಿತ್ ಬ್ಯಾಟಿಂಗ್ ನಿಧಾನವಾಗಿದ್ದರೂ, ಬಳಿಕ ಸ್ಫೋಟಕ ಬ್ಯಾಟಿಂಗ್‌ಗೆ ಒತ್ತು ನೀಡಿದರು. 7.2ನೆ ಓವರ್‌ನಲ್ಲಿ ಬದ್ರಿ ಅವರು ರೋಹಿತ್ ಶರ್ಮರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಔಟಾಗುವ ಮೊದಲು ಶರ್ಮ 43 ರನ್ (31ಎ, 3ಬೌ,3ಸಿ) ಗಳಿಸಿದರು. ಶಿಖರ್ ಧವನ್ ಬದಲಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದ ಅಜಿಂಕ್ಯ ರಹಾನೆ ಚೆನ್ನಾಗಿ ಆಡಿದರು.ಎರಡನೆ ವಿಕೆಟಗೆ ವಿರಾಟ್ ಕೊಹ್ಲಿ ಮತ್ತು ರಹಾನೆ 66 ರನ್ ಸೇರಿಸಿದರು.
40 ರನ್ (35ಎ, 2ಬೌ) ಗಳಿಸಿದ ರಹಾನೆ ದೊಡ್ಡ ಹೊಡೆತಕ್ಕೆ ಯತ್ನಿಸಿ ರಸ್ಸೆಲ್ ಎಸೆತದಲ್ಲಿ ಬ್ರಾವೊಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
 ಮುಂದೆ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮುಂದುವರಿಸಿದರು. ಧೋನಿ ಕ್ರೀಸ್‌ಗೆ ಆಗಮಿಸುತ್ತಿದ್ದಂತೆ ರನ್ ವೇಗೆ ಹೆಚ್ಚಿತು. ಮುರಿಯದ ಜೊತೆಯಾಟದಲ್ಲಿ 4.3 ಓವರ್‌ಗಳಲ್ಲಿ 14.22 ಸರಾಸರಿಯಂತೆ 64 ರನ್ ಜಮೆ ಮಾಡಿದರು.ವಿರಾಟ್ ಕೊಹ್ಲಿ 43ನೆ ಟ್ವೆಂಟಿ-20 ಪಂದ್ಯದಲ್ಲಿ 16ನೆ ಅರ್ಧಶತಕ ಪೂರ್ಣಗೊಳಿಸಿದರು.33 ಎಸೆತಗಳಲ್ಲಿ 5 ಬೌಂಡರಿಗಳ ಸಹಾಯದಿಂದ ಕೊಹ್ಲಿ ಅರ್ಧಶತಕ ಪೂರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News