ಆಸ್ಟ್ರೇಲಿಯದ ಶ್ರೀಲಂಕಾ ಪ್ರವಾಸ: ವೇಳಾಪಟ್ಟಿ ಪ್ರಕಟ
ಸಿಡ್ನಿ, ಎ.6: ಆಸ್ಟ್ರೇಲಿಯ ಕ್ರಿಕೆಟ್ ತಂಡ ಐದು ವರ್ಷಗಳ ಬಳಿಕ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಜುಲೈನಿಂದ ಆರಂಭವಾಗಲಿರುವ ಎರಡು ತಿಂಗಳ ಸುದೀರ್ಘ ಪ್ರವಾಸದಲ್ಲಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಆಡಲಿದೆ.
ಸ್ಟೀವ್ ಸ್ಮಿತ್ ಬಳಗವು ಶ್ರೀಲಂಕಾದ ವಿರುದ್ಧ ಕ್ಯಾಂಡಿ, ಗಾಲೆ ಹಾಗೂ ಕೊಲಂಬೊಗಳಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು, ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳಿರುವ ಟ್ವೆಂಟಿ-20 ಸರಣಿಯನ್ನು ಆಡಲಿದೆ. ಜು.11 ರಂದು ತಂಡ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ, ಶ್ರೀಲಂಕಾ ಪ್ರವಾಸದ ಬಗ್ಗೆ ತನ್ನ ವೆಬ್ ಸೈಟ್‌ನಲ್ಲಿ ಮಾಹಿತಿ ನೀಡಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಥನ್ ಲಿನ್, ಪೀಟರ್ ಸಿಡ್ಲ್ ಹಾಗೂ ಉಸ್ಮಾನ್ ಖ್ವಾಜಾ ಮಾತ್ರ ಅನುಭವಿ ಆಟಗಾರರಾಗಿದ್ದಾರೆ. 2011ರಲ್ಲಿ ಕೊನೆಯ ಬಾರಿ ಶ್ರೀಲಂಕಾದಲ್ಲಿ ಟೆಸ್ಟ್ ಸರಣಿಯನ್ನು ಆಡಿದ್ದ ಆಸೀಸ್ ಆ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿತ್ತು.
ಆಸ್ಟ್ರೇಲಿಯದ ಶ್ರೀಲಂಕಾ ಪ್ರವಾಸದ ವೇಳಾಪಟ್ಟಿ:
ಜು.26-30: ಪ್ರಥಮ ಟೆಸ್ಟ್, ಕ್ಯಾಂಡಿ
ಆ.4-8: ದ್ವಿತೀಯ ಟೆಸ್ಟ್, ಗಾಲೆ
ಆ.13-17: ಮೂರನೆ ಟೆಸ್ಟ್, ಕೊಲಂಬೊ
ಆ.21: ಪ್ರಥಮ ಏಕದಿನ, ಕೊಲಂಬೊ
ಆ.24: ದ್ವಿತೀಯ ಏಕದಿನ, ಕೊಲಂಬೊ
ಆ.28: ಮೂರನೆ ಏಕದಿನ, ಡಾಂಬುಲ್ಲಾ
ಆ.31: ನಾಲ್ಕನೆ ಏಕದಿನ, ಡಾಂಬುಲ್ಲಾ
ಸೆ.4: ಐದನೆ ಏಕದಿನ, ಕ್ಯಾಂಡಿ
ಸೆ.6: ಪ್ರಥಮ ಟ್ವೆಂಟಿ-20, ಪಲ್ಲೆಕಲ್
ಸೆ.9: ಎರಡನೆ ಟ್ವೆಂಟಿ-20, ಕೊಲಂಬೊ