×
Ad

ಟ್ವೆಂಟಿ-20 ವಿಶ್ವಕಪ್: ಫೇಸ್‌ಬುಕ್‌ನಲ್ಲಿ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ

Update: 2016-04-06 23:39 IST

ಹೊಸದಿಲ್ಲಿ, ಎ.6: ಈ ವರ್ಷದ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ 46 ಮಿಲಿಯನ್ ಗೂ ಅಧಿಕ ಮಂದಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಭೇಟಿ ನೀಡಿದ್ದಾರೆ. ಫೆ.15 ರಂದು ನಡೆದ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ವೇಳೆ 8.2 ಮಿಲಿಯನ್ ಜನರು ಫೇಸ್‌ಬುಕ್‌ಗೆ ಭೇಟಿ ನೀಡಿದ್ದಾರೆ.

ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಫೈನಲ್ ಪಂದ್ಯದ ವೇಳೆ 6.1 ಮಿಲಿಯನ್ ಜನರು ಫೇಸ್‌ಬುಕ್ ವೀಕ್ಷಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದ ವೇದಿಕೆ ಬುಧವಾರ ಹೇಳಿದೆ.

ಫೇಸ್‌ಬುಕ್‌ನಲ್ಲಿ ಅತ್ಯಂತ ಹೆಚ್ಚು ನಮೂದಿಸಲ್ಪಟ್ಟಿರುವ ಆಟಗಾರರೆಂದರೆ: ವಿರಾಟ್ ಕೊಹ್ಲಿ(ಭಾರತ), ಎಂ.ಎಸ್. ಧೋನಿ(ಭಾರತ), ಶಾಹಿದ್ ಅಫ್ರಿದಿ(ಪಾಕಿಸ್ತಾನ), ಕ್ರಿಸ್ ಗೇಲ್(ವೆಸ್ಟ್‌ಇಂಡೀಸ್), ರೋಹಿತ್ ಶರ್ಮ(ಭಾರತ), ತಮೀಮ್ ಇಕ್ಬಾಲ್(ಬಾಂಗ್ಲಾದೇಶ) ಹಾಗೂ ಜೋ ರೂಟ್(ಇಂಗ್ಲೆಂಡ್).

ಮಹಿಳಾ ಆಟಗಾರರ ಪೈಕಿ ಸನಾ ಮಿರ್(ಪಾಕಿಸ್ತಾನ), ಜಹಾನರ ಆಲಂ(ಬಾಂಗ್ಲಾದೇಶ), ಸ್ಟಫಾನಿ ಟೇಲರ್(ವೆಸ್ಟ್‌ಇಂಡೀಸ್), ಮಿಥಾಲಿ ರಾಜ್(ಭಾರತ) ಹಾಗೂ ಮೆಗ್ ಲ್ಯಾನಿಂಗ್(ಆಸ್ಟ್ರೇಲಿಯ). ಐಸಿಸಿ, ವಿವಿಧ ಕ್ರಿಕೆಟ್ ಮಂಡಳಿಗಳು, ಆಟಗಾರರು, ಪ್ರಕಾಶಕರು ಹಾಗೂ ಗಣ್ಯರು ಫೇಸ್‌ಬುಕ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳಿಗಾಗಿ 500 ಅಧಿಕ ಲೈವ್ ವೀಡಿಯೋವನ್ನು ಸೃಷ್ಟಿಸಿದ್ದವು.

ಪುರುಷ ಹಾಗೂ ಮಹಿಳಾ ಪಂದ್ಯಗಳು ಕೊನೆಗೊಂಡ ತಕ್ಷಣ 60ಕ್ಕೂ ಅಧಿಕ ಅಧಿಕೃತ ಪತ್ರಿಕಾಗೋಷ್ಠಿಗಳನ್ನು ಐಸಿಸಿ ಫೇಸ್‌ಬುಕ್ ಪೇಜ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಫೇಸ್‌ಬುಕ್ ಲೈವ್‌ನಲ್ಲಿ ತನ್ನ ನೆಚ್ಚಿನ ಆಟಗಾರರ ಮಾತುಕತೆಯನ್ನು ವೀಕ್ಷಿಸಿದ್ದಾರೆ. ಪ್ರತಿ ಪಂದ್ಯದ ಬಳಿಕ ಮಿಲಿಯನ್‌ಗೂ ಅಧಿಕ ಅಭಿಮಾನಿಗಳು ಫೇಸ್‌ಬುಕ್ ವೀಡಿಯೊವನ್ನು ವೀಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News