×
Ad

ಪಾಕ್ ಕ್ರಿಕೆಟ್ ಕೋಚ್ ಆಗಲು ವಿನೋದ್ ಕಾಂಬ್ಳಿ ಆಸಕ್ತಿ!

Update: 2016-04-07 23:40 IST

ಮುಂಬೈ, ಎ.7: ವಕಾರ್ ಯೂನಿಸ್ ರಾಜೀನಾಮೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪಿಸಿಬಿ ವಿದೇಶೀ ಕೋಚ್‌ಗೆ ಆದ್ಯತೆ ನೀಡುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ, ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪಾಕ್ ತಂಡಕ್ಕೆ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕ್ ತಂಡ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಯೂನಿಸ್ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಯೂನಿಸ್‌ರಿಂದ ತೆರವಾದ ಪಾಕಿಸ್ತಾನದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ತಾನು ಲಭ್ಯವಿದ್ದೇನೆ ಎಂದು ಪಾಕಿಸ್ತಾನದ ಪತ್ರಕರ್ತ ಅಸ್ಮಾ ಶಿರಾಝಿಗೆ ಕಾಂಬ್ಳಿ ಟ್ವೀಟ್ ಮಾಡಿದ್ದಾರೆ.

ವಸಿಂ ಅಕ್ರಂ ಭಾರತಕ್ಕೆ ಆಗಮಿಸಿ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಕೋಚ್ ನೀಡುತ್ತಾರೆ. ನಾನು ಏಕೆ ಪಾಕ್ ಕ್ರಿಕೆಟ್ ತಂಡಕ್ಕೆ ಕೋಚ್ ನೀಡಬಾರದು ಎಂಬ ತರ್ಕವನ್ನು ಕಾಂಬ್ಳಿ ಮುಂದಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News