×
Ad

ಮತ್ತೆ ಒಂದಾದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ

Update: 2016-04-08 10:51 IST

ಮುಂಬೈ, ಎ.8: ಕಳೆದ ಫೆಬ್ರವರಿಯಲ್ಲಿ ದೂರವಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಮತ್ತೆ ಒಂದಾಗಿದ್ದಾರೆ. ಈ ಇಬ್ಬರು ಇಲ್ಲಿನ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಫೆಬ್ರವರಿಯಲ್ಲಿ ಪರಸ್ಪರ ಮುನಿಸಿಕೊಂಡು ದೂರವಾದ ಬಳಿಕ ಕೊಹ್ಲಿ-ಅನುಷ್ಕಾ ಇದೇ ಮೊದಲ ಬಾರಿ ಜೊತೆ ಜೊತೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಂದ್ರಾ ರೆಸ್ಟೊರೆಂಟ್‌ನ ಹೊರಗೆ ತೆಗೆದ ಫೋಟೊವನ್ನು ಈ ಇಬ್ಬರು ತಮ್ಮ ಟ್ವಿಟ್ಟರ್‌ನ ಫ್ಯಾನ್‌ಕ್ಲಬ್‌ನಲ್ಲಿ ಹಾಕಿದ್ದಾರೆ. ಕ್ರಿಕೆಟಿಗ ಕೊಹ್ಲಿ ಗ್ರೇ-ಟೀಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದರು. ಅನುಷ್ಕಾ ಕಪ್ಪು ಕ್ರಾಪ್ ಹಾಗೂ ಪೆನ್ಸಿಲ್ ಸ್ಕರ್ಟ್ ಧರಿಸಿದ್ದರು.

ಇತ್ತೀಚೆಗೆ ಕೊನೆಗೊಂಡಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ 27 ರ ಹರೆಯದ ಕೊಹ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಅನುಷ್ಕಾರೊಂದಿಗೆ ರೆಸ್ಟೊರೆಂಟ್‌ನಲ್ಲಿ ಸಮಯ ಕಳೆದಿರುವ ಕೊಹ್ಲಿ ನಿರಾಳರಾದಂತೆ ಕಂಡು ಬಂದರು. ಈ ಇಬ್ಬರು ಪ್ರತ್ಯೇಕ ಕಾರಿನಲ್ಲಿ ರೆಸ್ಟೊರೆಂಟ್‌ನಿಂದ ನಿರ್ಗಮಿಸಿದರು.

ತನ್ನ ಕ್ರಿಕೆಟ್ ಜೀವನದಲ್ಲಿ ನಡೆಯುವ ನಕಾರಾತ್ಮಕ ಘಟನೆಗಳಿಗೆ ಅನುಷ್ಕಾ ಶರ್ಮರನ್ನು ಗುರಿ ಪಡಿಸುತ್ತಿರುವುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News