ಐಪಿಎಲ್: ಹೊಸ ಜರ್ಸಿ ಅನಾವರಣಗೊಳಿಸಿದ ಆರ್‌ಸಿಬಿ
Update: 2016-04-08 13:19 IST
ಬೆಂಗಳೂರು, ಎ.8: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಕಪ್ಪು ಹಾಗೂ ಕೆಂಪು ಬಣ್ಣದ ನೂತನ ಜರ್ಸಿಯನ್ನು ಶುಕ್ರವಾರ ಅನಾವರಣಗೊಳಿಸಿದೆ.
ಆರ್‌ಸಿಬಿ ಆಟಗಾರರಾದ ಶೇನ್ ವ್ಯಾಟ್ಸನ್, ಕೆ.ಎಲ್. ಅರುಣ್, ಸ್ಟುವರ್ಟ್ ಬಿನ್ನಿ, ವರುಣ್ ಆ್ಯರೊನ್, ಸರ್ಫರಾಝ್ ಖಾನ್, ಎಸ್. ಅರವಿಂದ್ ಹಾಗೂ ಯುಝ್ವೆಂದ್ರ ಚಾಹಲ್ ಜರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಫೋಟಕ ದಾಂಡಿಗ ಎಬಿಡಿ ವಿಲಿಯರ್ಸ್ ಕಾರ್ಯಕ್ರಮದಲ್ಲಿ ಹಾಜರಾಗಿಲ್ಲ.
ಈ ಬಾರಿ ನಮ್ಮದು ಉತ್ತಮ ತಂಡವಾಗಿದೆ. ನಮ್ಮ ತಂಡಕ್ಕೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳ ದಂಡೇ ಇದೆ. ಆದ್ದರಿಂದ ಈ ನಗರಕ್ಕೆ ಬರಲು ನನಗೆ ಸಂತೋಷವಾಗುತ್ತದೆ’’ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ
. ಬೆಂಗಳೂರು ತಂಡ ಸಲೀಮ್ ಮರ್ಚೆಂಟ್ ಸಂಯೋಜನೆಯ ತಂಡದ ಗೀತೆಯನ್ನು ಅನಾವರಣಗೊಳಿಸಿದೆ.