×
Ad

ಐಪಿಎಲ್: ಪುಣೆಗೆ 122 ರನ್ ಗುರಿ

Update: 2016-04-09 22:14 IST

ಮುಂಬೈ, ಎ.9: ಎಂಎಸ್ ಧೋನಿ ನಾಯಕತ್ವದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 9ನೆ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 121 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಮುಂಬೈ ಇನಿಂಗ್ಸ್‌ನಲ್ಲಿ ಹರ್ಭಜನ್ ಸಿಂಗ್(ಔಟಾಗದೆ 45 ರನ್, 30 ಎಸೆತ, 7 ಬೌಂಡರಿ, 1 ಸಿಕ್ಸರ್) ಅಗ್ರ ಸ್ಕೋರರ್ ಎನಿಸಿಕೊಂಡರು.ಇಶಾಂತ್ ಶರ್ಮ ಎಸೆದ ಅಂತಿಮ ಓವರ್‌ನಲ್ಲಿ 15 ರನ್ ಗಳಿಸಿದ ಹರ್ಭಜನ್ ತಂಡದ ಮೊತ್ತವನ್ನು 120ರ ಗಡಿ ದಾಟಿಸಿದರು. ಅಂಬಟಿ ರಾಯುಡು(22) ಎರಡಂಕೆ ದಾಟಿದರು.

 ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ಆರಂಭವಾದ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಟಾಸ್ ಜಯಿಸಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಮುಂಬೈ ನಾಯಕನ ನಿರ್ಧಾರ ತಪ್ಪೆಂದು ತಿಳಿಯಲು ಹೆಚ್ಚುಹೊತ್ತು ಹಿಡಿಯಲಿಲ್ಲ. 5ನೆ ಓವರ್‌ನಲ್ಲಿ 30 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ದಾಂಡಿಗರು ಪೆವಿಲಿಯನ್ ಸೇರಿದರು. ಇಶಾಂತ್ ಶರ್ಮ ಹಾಗೂ ಮಿಚೆಲ್ ಮಾರ್ಷ್ ಜೋಡಿ ಮುಂಬೈನ ಅಗ್ರ ಕ್ರಮಾಂಕದ ದಾಂಡಿಗರನ್ನು ಕಾಡಿದರು.

ವೇಗಿಗಳಾದ ಇಶಾಂತ್(2-36) ಹಾಗೂ ಮಾರ್ಷ್‌ಗೆ(2-21) ಉತ್ತಮ ಬೆಂಬಲ ನೀಡಿದ ಸ್ಪಿನ್ನರ್ ಮುರುಗನ್ ಅಶ್ವಿನ್ 16 ರನ್ ವೆಚ್ಚಕ್ಕೆ 1 ವಿಕೆಟ್ ಪಡೆದು ಮುಂಬೈ ರನ್ ಗಳಿಸದಂತೆ ತಡೆದರು. ಕೇವಲ ಒಂದು ಓವರ್ ಎಸೆದ ಆರ್.ಅಶ್ವಿನ್ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News