×
Ad

ಐಪಿಎಲ್ ಪಂದ್ಯಗಳಲ್ಲಿ ಹಿಂದಿ ಚಿತ್ರಗೀತೆಗಳ ಪ್ರಸಾರಕ್ಕೆ ದಿಲ್ಲಿ ಹೈಕೋರ್ಟ್ ನಿರ್ಬಂಧ

Update: 2016-04-09 23:23 IST

ಹೊಸದಿಲ್ಲಿ, ಎ.9: ಇದೀಗ ಆರಂಭವಾಗಿರುವ ಐಪಿಎಲ್ ಟ್ವೆಂಟಿ-20 ಲೀಗ್‌ನಲ್ಲಿ ಇನ್ನು ಮುಂದೆ ಜನಪ್ರಿಯ ಬಾಲಿವುಡ್ ಹಾಡುಗಳನ್ನು ಪ್ರಸಾರ ಮಾಡದಂತೆ ದಿಲ್ಲಿ ಹೈಕೋರ್ಟ್ ತಾತ್ಕಾಲಿ ನಿರ್ಬಂಧ ಹೇರಿದೆ.

 ಹಿನ್ನೆಲೆ ಗಾಯಕರ ಅಸೋಸಿಯೇಶನ್‌ನ ಸದಸ್ಯರಿಂದ ಅನುಮತಿ ಪಡೆಯದೆ ಬಿಸಿಸಿಐ ಹಾಗೂ ಏಳು ಐಪಿಎಲ್ ತಂಡಗಳು ಚಿತ್ರಗೀತೆಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ನಿರ್ಬಂಧಿಸಿ ದಿಲ್ಲಿ ಹೈಕೋರ್ಟ್ ಶನಿವಾರ ತೀರ್ಪು ನೀಡಿದೆ.

 ಡೆಲ್ಲಿ ಡೆರ್ ಡೆವಿಲ್ಸ್ ಹೊರತುಪಡಿಸಿ ಉಳಿದೆಲ್ಲ ತಂಡಗಳು ಗೀತೆಯ ಪ್ರದರ್ಶನದ ಹಕ್ಕನ್ನು ಪಡೆಯದೆ ಗೀತೆಗಳನ್ನು ಪ್ರಸಾರ ಮಾಡುತ್ತಿವೆ. ಇದನ್ನು ನಿರ್ಬಂಧಿಸಬೇಕೆಂದು ಕೋರಿ ಇಂಡಿಯನ್ ಸಿಂಗರ್ಸ್‌ ರೈಟ್ಸ್ ಅಸೋಸಿಯೇಶನ್(ಐಎಸ್‌ಆರ್‌ಎ) ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು.

ಎ.19ರ ತನಕ ಐಪಿಎಲ್‌ನಲ್ಲಿ ಹಿಂದಿ ಗೀತೆಗಳನ್ನು ಪ್ರಸಾರ ಮಾಡದಂತೆ ಕಾರ್ಯಕ್ರಮ ಆಯೋಜಕ ಕಂಪೆನಿ-ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಪ್ರೈ.ಲಿ. ಹಾಗೂ ಮ್ಯಾನೇಜರ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮುಂದಿನ ವಿಚಾರಣೆ ನಡೆಯುವ ತನಕ ಐಎಸ್‌ಆರ್‌ಎಯಿಂದ ಪ್ರಸಾರ ಹಕ್ಕು ಪ್ರಮಾಣಪತ್ರವನ್ನು ಪಡೆಯದೇ ಹಿಂದಿ ಚಿತ್ರಗೀತೆಗಳನ್ನು ಐಪಿಎಲ್ ಪಂದ್ಯಗಳಲ್ಲಿ ಪ್ರಸಾರ ಮಾಡುವಂತಿಲ್ಲ ಎಂದು ಜಸ್ಟಿಸ್ ವಿಪಿನ್ ಸಾಂಘಿ ಆದೇಶಿಸಿದ್ದಾರೆ.

ಆರ್‌ಸಿಬಿ, ಕೆಕೆಆರ್, ಮುಂಬೈ ಇಂಡಿಯನ್ಸ್, ಹೈದರಾಬಾದ್, ಪಂಜಾಬ್, ಪುಣೆ ಹಾಗೂ ಲಯನ್ಸ್ ತಂಡಗಳು ಐಎಸ್‌ಆರ್‌ಎ ಆರೋಪಕ್ಕೆ ಉತ್ತರ ನೀಡಬೇಕಾಗಿದೆ. ಬಿಸಿಸಿಐ ಇಲ್ಲವೇ ಡಿಎನ್‌ಎ 2014 ಹಾಗೂ 2015ರ ಐಪಿಎಲ್ ಋತುವಿನಲ್ಲಿ ತನ್ನ ಸದಸ್ಯರು ಹಾಡಿರುವ ಹಾಡಿನ ಸಂಭಾವನೆಯನ್ನು ಪಾವತಿಸಿಲ್ಲ. ಸಂಭಾವನೆಯ ಮೊತ್ತ ಕ್ರಮವಾಗಿ 19,37,000 ಹಾಗೂ 32,00,000 ಆಗಿರುತ್ತದೆ ಎಂದು ಅಸೋಸಿಯೇಶನ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News