×
Ad

ಹಾಕ್ ಬೇ ಕಪ್ ಟೂರ್ನಿ: ಮಹಿಳಾ ಹಾಕಿ ತಂಡಕ್ಕೆ 6ನೆ ಸ್ಥಾನ

Update: 2016-04-10 23:53 IST

ಹೇಸ್ಟಿಂಗ್ಸ್(ನ್ಯೂಝಿಲೆಂಡ್), ಎ.10: ಹಾಕ್ ಬೇ ಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 3-4 ಅಂತರದಿಂದ ಸೋತಿರುವ ಭಾರತದ ಮಹಿಳಾ ಹಾಕಿ ತಂಡ ಆರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ರವಿವಾರ 5-6ನೆ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಸಮಯದಲ್ಲಿ 2-2 ರಿಂದ ಟೈ ಸಾಧಿಸಿದದವು. ನಾಲ್ಕನೆ ನಿಮಿಷದಲ್ಲಿ ಐರ್ಲೆಂಡ್ ಗೋಲು ಖಾತೆ ತೆರೆಯಿತು. 25ನೆ ನಿಮಿಷದಲ್ಲಿ ಗೋಲು ಬಾರಿಸಿದ ಭಾರತದ ನಮಿತಾ ಟೊಪ್ಪೊ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

ವೇಗದ ಆಟಕ್ಕೆ ಒತ್ತು ನೀಡಿದ ಉಭಯ ತಂಡಗಳು ಹಲವು ಅವಕಾಶವನ್ನು ಸೃಷ್ಟಿಸಿದವು. ಭಾರತದ ರಕ್ಷಣಾವಿಭಾಗ ಹಾಗೂ ಗೋಲ್‌ಕೀಪರ್ ಸವಿತಾ ಅವರು ಎದುರಾಳಿ ಐರ್ಲೆಂಡ್‌ಗೆ ಹೆಚ್ಚು ಗೋಲು ಬಾರಿಸಲು ಅವಕಾಶ ನೀಡಲಿಲ್ಲ.

ಪಂದ್ಯ 2-2 ರಿಂದ ಟೈಗೊಂಡ ಕಾರಣ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶವನ್ನು ನಿರ್ಧರಿಸಲಾಯಿತು. ಪೆನಾಲ್ಟಿಯಲ್ಲಿ 4-3 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಐರ್ಲೆಂಡ್ 5ನೆ ಸ್ಥಾನದೊಂದಿಗೆ ಟೂರ್ನಿಯನ್ನು ಕೊನೆಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News