×
Ad

‘ಬೊಗಳುವ ನಾಯಿಗೆ ಕಚ್ಚಿದರೇ’ ಟೀಮ್ ಇಂಡಿಯಾದ ಆಟಗಾರರು ?

Update: 2016-04-11 21:32 IST

  ಮುಂಬೈ, ಎ.11: ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರನ್ನು ವೀಕ್ಷಕ ವಿವರಣೆಗಾರರ ತಂಡದಿಂದ ಕೈ ಬಿಡುವಲ್ಲಿ ಭಾರತದ ಕ್ರಿಕೆಟ್ ತಂಡದ ಆಟಗಾರರು ಪ್ರಮುಖ ಪಾತ್ರ ವಹಿಸಿರುವುದು ಬೆಳಕಿಗೆ ಬಂದಿದೆ.
 ಭೋಗ್ಲೆ ಅವರನ್ನು ಟಿವಿ ವೀಕ್ಷಕ ವಿವರಣೆಗಾರರ ತಂಡದಿಂದ ದಿಢೀಡರನೆ ಕೈ ಬಿಡಲು ಆಟಗಾರರ ಲಾಬಿಯೇ ಕಾರಣ ಎಂದು ತಿಳಿದು ಬಂದಿದೆ.
ನಿಷ್ಠುರ ಅಭಿಪ್ರಾಯವೇ ಹರ್ಷ ಭೋಗ್ಲೆಗೆ ಮುಳುವಾಗಿದೆ. ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ವೇಳೆ ಹರ್ಷ ಭೋಗ್ಲೆ ಭಾರತದ ವೀಕ್ಷಕ ವಿವರಣೆಗಾರರು ಭಾರತದ ಆಟಗಾರರನ್ನು ಟೀಕಿಸುವುದು ಸರಿಯಲ್ಲ ಎಂದು ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದರು. ನಾಯಕ ಧೋನಿ ಅವರು ಬಚ್ಚನ್ ಮಾತಿಗೆ ಧ್ವನಿಗೂಡಿಸುವ ಮೂಲಕ ಭೋಗ್ಲೆಗೆ ತಿರುಗೇಟು ನೀಡಿದ್ದರು.
54ರ ಹರೆಯದ ಭೋಗ್ಲೆ ಕಳೆದ 20 ವರ್ಷಗಳಿಂದ ವೀಕ್ಷಕ ವಿವರಣೆಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಆದರೆ ಅವರು ಇತ್ತೀಚಿನ ದಿನಗಳಲ್ಲಿ ವೀಕ್ಷಕ ವಿವರಣೆ ಮಾಡುವಾಗ ಭಾರತದ ಆಟಗಾರರ ವೈಫಲ್ಯವನ್ನು ಯಾವುದೇ ಮುಲಾಜಿಲ್ಲದೆ ಟೀಕಿಸಿದ್ದರು. ಇದು ಟೀಮ್ ಇಂಡಿಯಾದ ಆಟಗಾರರನ್ನು ಕೆರಳಿಸಿತ್ತು. ಅವರು ಬಿಸಿಸಿಐನ ಮುಖ್ಯಸ್ಥರಿಗೆ ಭೋಗ್ಲೆಯನ್ನು ವೀಕ್ಷಕ ವಿವರಣೆಗಾರರ ತಂಡದಿಂದ ಕೈ ಬಿಡಲು ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಭೋಗ್ಲೆಯನ್ನು ಕೈ ಬಿಟ್ಟಿದೆ.
     ಭೋಗ್ಲೆ ಅವರು ಬಿಸಿಸಿಐನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಮುಗಿದಿದೆ. ಭೋಗ್ಲ್ಲೆಗೆ ವೀಕ್ಷಕ ವಿವರಣೆಗೆ ಲಕ್ಷ್ಮಣ ರೇಖೆ ವಿಧಿಸಿರಲಿಲ್ಲ.ಅವರು ಅವರಿಗೆ ವೀಕ್ಷಕ ವಿವರಣೆ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಬಿಸಿಸಿಐ ತಿಳಿಸಲಿಲ್ಲ. ಭೋಗ್ಲೆ ಅವರು ಬಿಸಿಸಿಐನ ನಿಯಮವನ್ನು ಉಲ್ಲಂಘಿಸಿದರೆ ? ಎನ್ನುವುದು ಸ್ಪಷ್ಟಗೊಂಡಿಲ್ಲ.ಆದರೆ ಅವರು ಅಮಿತಾಭ್ ಬಚ್ಚನ್ ವಿರುದ್ಧ ಟ್ವೀಟ್ ಮಾಡಿರುವುದು ಕೆಲಸ ಕಳೆದುಕೊಳ್ಳಲು ಕಾರಣಗಳಲ್ಲಿ ಒಂದಾಗಿದೆ.
 ಭಾರತದ ಕ್ರಿಕೆಟ್ ತಂಡದ ಆಟಗಾರರಿಬ್ಬರು ಭೋಗ್ಲ್ಲೆೆಯ ವೀಕ್ಷಕ ವಿವರಣೆಯ ಬಗ್ಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಭೀರವಾಗಿ ಚರ್ಚಿಸುತ್ತಿದ್ದರು. ಅವರು ಭೋಗ್ಲೆ ವಿರುದ್ಧ ಬಿಸಿಸಿಐನ ಮುಖ್ಯಸ್ಥರಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಬಿಸಿಸಿಐನ ಕಾರ್ಯದರ್ಶಿ ಅನುರಾಗ್ ಠಾಕೂರ್ ಐಪಿಎಲ್‌ನ ಪಂದ್ಯಗಳಿಗೆ ಅಂಪೈರ್‌ಗಳ ನೇಮಕ ಮತ್ತು ವೀಕ್ಷಕ ವಿವರಣೆಕಾರರ ನೇಮಕಾತಿಯಲ್ಲಿ ಕೈಯಾಡಿಸಿದ್ದಾರೆ ಎಂದು ಗೊತ್ತಾಗಿದೆ. ಭೋಗ್ಲೆ ಬಿಸಿಸಿಐ ತನ್ನನ್ನು ವೀಕ್ಷಕ ವಿವರಣೆಗಾರರ ತಂಡದಿಂದ ಕೈ ಬಿಟ್ಟಿರುವ ವಿಚಾರದ ಬಗ್ಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಲು ಮುಂದಾಗಿಲ್ಲ. ಬಿಸಿಸಿಐ ಯಾವ ಕಾರಣಕ್ಕಾಗಿ ತನ್ನನ್ನು ಕೈ ಬಿಟ್ಟಿತು ಎನ್ನುವುದು ಗೊತ್ತಿಲ್ಲ ಎಂದು ತನ್ನ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. 
ಇತ್ತೀಚೆಗೆ ಬಿಸಿಸಿಐ ವೀಕ್ಷಕ ವಿವರಣೆಗಾರರಿಗೆ ದೀರ್ಘಾವಧಿಯ ಒಪ್ಪಂದ ನೀಡುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಈ ಕಾರಣದಿಂದಾಗಿ ಹರ್ಷ ಭೋಗ್ಲೆಗೆ ಅವಕಾಶ ನಿರಾಕರಿಸಲಾಗಿದೆ. ಮುಂದಿನ ಸರಣಿ ವೇಳೆ ಭೋಗ್ಲೆ ವೀಕ್ಷಕ ವಿವರಣೆಗಾರರ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News