×
Ad

‘ಗಂಭೀರ’ಬ್ಯಾಟಿಂಗ್‌ಗೆ ಶರಣಾದ ವಾರ್ನರ್ ಪಡೆ

Update: 2016-04-16 21:55 IST

ಹೈದರಾಬಾದ್, ಎ.16: ಟೆಸ್ಟ್ ಹಾಗೂ ಏಕದಿನ ತಂಡದಿಂದ ದೂರವಾಗಿದ್ದರೂ ಚುಟುಕು ಕ್ರಿಕೆಟ್‌ನಲ್ಲಿ ಅಪೂರ್ವ ಫಾರ್ಮ್‌ನಲ್ಲಿರುವ ನಾಯಕ ಗೌತಮ್ ಗಂಭೀರ್ ಅವರ ಆಕರ್ಷಕ 90 ರನ್‌ಗಳ ನೆರವಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ತಂಡ ಇಲ್ಲಿ ನಡೆದ ಐಪಿಎಲ್ ಟ್ವೆಂಟಿ-20 ಟೂರ್ನಿಯ ಎಂಟನೆ ಪಂದ್ಯದಲ್ಲಿ ಸನ್ ರೈಸರ್ಸ್‌ ಹೈದರಾಬಾದ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಗೆಲುವಿಗೆ 143 ರನ್‌ಗಳ ಸವಾಲನ್ನು ಪಡೆದ ಕೋಲ್ಕತಾ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ 146 ರನ್ ಗಳಿಸಿ ಸುಲಭದ ಜಯ ದಾಖಲಿಸಿತು.
ಕೋಲ್ಕತಾ ತಂಡ ನಾಯಕ ಗಂಭೀರ್ 60 ಎಸೆತಗಳನ್ನು ಎದುರಿಸಿ 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಔಟಾಗದೆ 90 ರನ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
 ಇನಿಂಗ್ಸ್ ಆರಂಭಿಸಿದ ಗಂಭೀರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಮೊದಲ ವಿಕೆಟ್‌ಗೆ 12.3 ಓವರ್‌ಗಳಲ್ಲಿ 92 ರನ್ ದಾಖಲಿಸಿದರು. 38 ರನ್(34ಎ, 3ಬೌ,1ಸಿ) ಗಳಿಸಿದ ಆರಂಭಿಕ ದಾಂಡಿಗ ಉತ್ತಪ್ಪ ಅವರನ್ನು ಆಶೀಷ್ ರೆಡ್ಡಿ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
    ತೆರವಾದ ಜಾಗಕ್ಕೆ ಆ್ಯಂಡ್ರೆ ರಸೆಲ್ ಆಗಮಿಸಿದ್ದರೂ ಅವರಿಗೆ ಮುಸ್ತಫಿಝುರ್ರಹ್ಮಾನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅವಕಾಶ ನೀಡಲಿಲ್ಲ. ಕೇವಲ 2 ರನ್ ಗಳಿಸಿ ರಸೆಲ್ ನಿರ್ಗಮಿಸಿದರು.
ಮನೀಷ್ ಪಾಂಡೆ ಮೂರನೆ ವಿಕೆಟ್‌ಗೆ ಗಂಭೀರ್‌ಗೆ ಸಾಥ್ ನೀಡಿ ಔಟಾಗದೆ 11 ರನ್ ಗಳಿಸಿದರು. ಇವರ ಜೊತೆಯಾಟದಲ್ಲಿ ತಂಡದ ಖಾತೆಗೆ 45 ರನ್ ಸೇರ್ಪಡೆಗೊಂಡಿತು.18.2ನೆ ಓವರ್‌ನಲ್ಲಿ ಗಂಭೀರ್ ಅವರು ಕರಣ್ ಶರ್ಮ ಎಸೆತದಲ್ಲಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ತಂಡದ ಗೆಲುವಿನ ರನ್ ಪೂರೈಸಿದರು.
 ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮುಸ್ತಾಫಿಝುರ್ರಹ್ಮಾನ್ ಮತ್ತು ಆಶೀಷ್ ರೆಡ್ಡಿ ತಲಾ ಒಂದು ವಿಕೆಟ್ ಹಂಚಿಕೊಂಡರು.
ಸನ್‌ರೈಸರ್ಸ್‌ ಹೈದರಾಬಾದ್ 142/7: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು.
ಉಮೇಶ್ ಯಾದವ್(28ಕ್ಕೆ 3) ಮತ್ತು ಮೊರ್ನೆ ಮಾರ್ಕೆಲ್ (2-35), ಆ್ಯಂಡಿ ರಸೆಲ್ (1-19) ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ದೊಡ್ಡ ಮೊತ್ತದ ಸವಾಲನ್ನು ಸೇರಿಸಲು ಅವಕಾಶ ನೀಡಲಿಲ್ಲ.

 ನಾಯಕ ಡೇವಿಡ್ ವಾರ್ನರ್(13) ಅವರ ಜೊತೆ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ (6) ಮತ್ತೊಮ್ಮೆ ವಿಫಲರಾದರು. ಹೆನ್ರಿಕ್ಸ್(6), ಹೂಡಾ(6) ಒಂದಂಕೆಯ ಕೊಡುಗೆ ನೀಡಿದರು. ತಂಡದ ಸ್ಕೋರ್ 9.4 ಓವರ್‌ಗಳಲ್ಲಿ 50 ಆಗಿದ್ದಾಗ 4 ವಿಕೆಟ್ ಪತನಗೊಂಡಿತು. ಈ ಹಂತದಲ್ಲಿ ಇಯಾನ್ ಮೊರ್ಗನ್ ಮತ್ತು ನಮನ್ ಓಜಾ (37) ಬ್ಯಾಟಿಂಗ್ ಮುಂದುವರಿಸಿದರು. ಅವರು 67 ರನ್‌ಗಳ ಜೊತೆಯಾಟ ನೀಡಿದರು. ಮೊರ್ಗನ್ 43 ಎಸೆತಗಳನ್ನು ಎದುರಿಸಿದರು. 3 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 51 ರನ್‌ಗಳ ಕೊಡುಗೆ ನೀಡಿದರು. ಓಜಾ ನಿರ್ಗಮನದ ಬಳಿಕ ಆಶೀಷ್ ರೆಡ್ಡಿ ಅವರು ಮೊರ್ಗನ್‌ಗೆ ಜೊತೆಯಾದರು. ಇವರು ಸ್ಕೋರ್‌ನ್ನು 18.4 ಓವರ್‌ಗಳಲ್ಲಿ 128ಕ್ಕೆ ಏರಿಸಿದರು.ರೆಡ್ಡಿ 13 ರನ್ (8ಎ,1ಸಿ) ಗಳಿಸಿದರು.

ಸ್ಕೋರ್ ಪಟ್ಟಿ
ಸನ್‌ರೈಸರ್ಸ್‌ ಹೈದರಾಬಾದ್ 20 ಓವರ್‌ಗಳಲ್ಲಿ 142/7
 ವಾರ್ನರ್ ಸಿ ಸೂರ್ಯ ಯಾದವ್ ಬಿ ಉಮೇಶ್ ಯಾದವ್ 13
 ಶಿಖರ್ ಧವನ್ ಸಿ ಉತ್ತಪ್ಪ ಬಿ ಮಾರ್ಕೆಲ್06
 ಹೆನ್ರಿಕ್ಸ್ ಎಲ್‌ಬಿಡಬ್ಲು ಬಿ ಉಮೇಶ್ ಯಾದವ್06
 ಮೊರ್ಗನ್ ಸಿ ಶಾಕಿಬ್ ಬಿ ಉಮೇಶ್ ಯಾದವ್51
  ಹೂಡ ಸಿ ಉಮೇಶ್ ಯಾದವ್ ಬಿ ರಸೆಲ್06
  ನಮನ್ ಓಜಾ ಸಿ ಚಾವ್ಲಾ ಬಿ ಮಾರ್ಕೆಲ್37
 ಆಶೀಷ್ ರೆಡ್ಡಿ ರನೌಟ್(ಶಾಕಿಬ್/ಉತ್ತಪ್ಪ)13
  ಕರಣ್ ಶರ್ಮ ಔಟಾಗದೆ 02
  ಭುವನೇಶ್ವರ ಕುಮಾರ್ ಔಟಾಗದೆ00
  ಇತರೆ08

ವಿಕೆಟ್ ಪತನ: 1-18, 2-23, 3-36, 4-50,5-117, 6-128, 7-141

ಬೌಲಿಂಗ್ ವಿವರ
 ಮೊರ್ನೆ ಮೊರ್ಕೆಲ್ 4-0-35-2
ಉಮೇಶ್ ಯಾದವ್4-0-28-3
ಶಾಕಿಬ್ ಅಲ್ ಹಸನ್3-0-18-0
 ಆ್ಯಂಡ್ರೆ ರಸೆಲ್4-0-19-1
 ಸುನೀಲ್ ನರೇನ್4-0-26-0
  ಪಿಯೂಷ್ ಚಾವ್ಲಾ 1-0-13-0

ಕೋಲ್ಕತಾ ನೈಟ್ ರೈಡರ್ಸ್‌ 18.2 ಓವರ್‌ಗಳಲ್ಲಿ 146/2
ರಾಬಿನ್ ಉತ್ತಪ್ಪ ಎಲ್‌ಬಿಡಬ್ಲು ಬಿ ರೆಡ್ಡಿ38
   ಗೌತಮ್ ಗಂಭೀರ್ ಔಟಾಗದೆ90
 ರಸೆಲ್ ಎಲ್‌ಬಿಡಬ್ಲು ಬಿ ಮುಸ್ತಾಫಿಝುರ್ರಹ್ಮಾನ್ 02
 ಮನೀಷ್ ಪಾಂಡೆ ಔಟಾಗದೆ11
 ಇತರೆ05
ವಿಕೆಟ್ ಪತನ: 1-92, 2-97

ಬೌಲಿಂಗ್ ವಿವರ
    ಭುವನೇಶ್ವರ ಕುಮಾರ್4.0-0-29-0
 ಬಿ.ಬಿ.ಸ್ರಾನ್ 4.0-0-31-0
ಮುಸ್ತಾಫಿಝುರ್ರಹ್ಮಾನ್ 4.0-0-29-1
ಕರಣ್ ಶರ್ಮ2.2-0-24-0
ಹೆನ್ರಿಕ್ಸ್2.0-0-19-0
ಆಶೀಷ್ ರೆಡ್ಡಿ2.0-0-14-1

*ಪಂದ್ಯಶ್ರೇಷ್ಠ: ಗೌತಮ್ ಗಂಭೀರ್
,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News