ಸನ್‌ರೈಸರ್ಸ್‌ಗೆ ಮೊದಲ ಜಯ
ಹೈದರಾಬಾದ್, ಎ.18: ನಾಯಕ ಡೇವಿಡ್ ವಾರ್ನರ್ ದಾಖಲಿಸಿದ 90 ರನ್‌ಗಳ ನೆರವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿತು.
ಐಪಿಎಲ್ ಟ್ವೆಂಟಿ-20 ಟೂರ್ನಿಯ 12ನೆ ಪಂದ್ಯದಲ್ಲಿ ಗೆಲುವಿಗೆ 143 ರನ್ ಮಾಡಬೇಕಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ವಾರ್ನರ್ 90 ರನ್(59ಎ, 7ಬೌ,4ಸಿ) , ಹೆನ್ರಿಕ್ಸ್ 20ರನ್, ಮೊರ್ಗನ್ 11ರನ್, ಹೂಡಾ ಔಟಾಗದೆ 17 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮುಂಬೈ 142/6: ಅಂಬಟಿ ರಾಯುಡು ಅರ್ಧಶತಕ (54)ಮತ್ತು ಹಿಮಾಂಶು ಪಾಂಡ್ಯ (49) ರನ್ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 142 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ 7.1 ಓವರ್‌ಗಳಲ್ಲಿ 43 ರನ್ ಗಳಿಸುವ ಹೊತ್ತಿಗೆ ಮೂರು ವಿಕೆಟ್ ಕಳೆದುಕೊಂಡಿತು.
ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್(2) ಅವರನ್ನು ಭುವನೇಶ್ವರ ಕುಮಾರ್ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ಗಪ್ಟಿಲ್ ಜೊತೆ ಇನಿಂಗ್ಸ್ ಆರಂಭಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ (10) ಎರಡಂಕೆಯ ಸ್ಕೋರ್ ದಾಖಲಿಸಿ ಸ್ರಾನ್ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ನಾಯಕ ರೋಹಿತ್ ಶರ್ಮ(5) ರನೌಟಾಗಿ ಪೆವಿಲಿಯನ್‌ಗೆ ನಿರ್ಗಮಿಸುವುದರೊಂದಿಗೆ ತಂಡ ಒತ್ತಡಕ್ಕೆ ಸಿಲುಕಿತು. ಜೋ ಬಟ್ಲರ್ 11 ರನ್ ಗಳಿಸಿ ಸ್ರಾನ್‌ಗೆ ವಿಕೆಟ್ ಒಪ್ಪಿಸಿದರು.
10.4 ಓವರ್‌ಗಳಲ್ಲಿ 60ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಮುಂಬೈ ತಂಡದ ಬ್ಯಾಟಿಂಗನ್ನು ಮುನ್ನಡೆಸಿದ ಅಂಬಟಿ ರಾಯುಡು ಮತ್ತು ಹಿಮಾಂಶು ಪಾಂಡ್ಯ 5ನೆ ವಿಕೆಟ್‌ಗೆ 63 ರನ್ ಸೇರಿಸಿದರು.
ರಾಯುಡು 54 ರನ್(49ಎ, 3ಬೌ,2ಸಿ) ಮತ್ತು ಹಿಮಾಂಶು ಪಾಂಡ್ಯ ಔಟಾಗದೆ 49 ರನ್(28ಎ,3ಬೌ,3ಸಿ) ಗಳಿಸಿ ಮುಂಬೈನ ಸ್ಕೋರ್ 140ರ ಗಡಿ ದಾಟಲು ನೆರವಾದರು.
ಸನ್‌ರೈಸರ್ಸ್ ತಂಡದ ಬರೀಂದರ್ ಸ್ರಾನ್ 28ಕ್ಕೆ 3 , ಭುವನೇಶ್ವರ ಕುಮಾರ್ 17ಕ್ಕೆ 1 ಮತ್ತು ಮುಸ್ತಫಿಝುರ್ರಹ್ಮಾನ್ 32ಕ್ಕೆ 1 ವಿಕೆಟ್ ಹಂಚಿಕೊಂಡರು.