ಇಂಝಮಾಮ್ ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥ
ಕರಾಚಿ, ಎ.18: ಪಾಕಿಸ್ತಾನ ಕ್ರಿಕೆಟ್ ಮಡಳಿಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ನೇಮಕಗೊಂಡಿದ್ದಾರೆ.
ಅಫ್ಘಾನಿಸ್ತಾನ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿ ವಾಪಸಾಗಿದ್ದ ಇಂಝಮಾಮ್ ಅವರಿಗೆ ಪಿಸಿಬಿ ಪ್ರಮುಖ ಜವಾಬ್ದಾರಿಯನ್ನು ನೀಡಿದೆ. ಇಂಝಮಾಮ್ 2015ರಲ್ಲಿ ಅಫ್ಘಾನ್ ತಂಡದ ಪ್ರಮುಖ ಕೋಚ್ ಆಗಿ ನೇಮಕಗೊಂಡಿದ್ದರು.2012-13ರಲ್ಲಿ ಪಾಕ್ ತಂಡದ ಬ್ಯಾಟಿಂಗ್ ಸಲಹೆಗಾರರಾಗಿದ್ದ ಇಂಝಮಾಮ್ ತನ್ನ ತಂಡದ ಸಹ ಆಟಗಾರರಾಗಿದ್ದ ವಕಾರ್ ಯೂನಿಸ್ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
46ರ ಹರೆಯದ ಇಂಝಮಾಮ್ ಪಾಕ್ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದವರು. 120 ಟೆಸ್ಟ್‌ಗಳಲ್ಲಿ 25 ಶತಕ ಮತ್ತು 46 ಅರ್ಧಶತಕಗಳನ್ನು ಒಳಗೊಂಡ 8,830 ರನ್ ಗಳಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ 329 ರನ್. 378 ಏಕದಿನ ಪಂದ್ಯಗಳನ್ನು ಆಡಿರುವ ಇಂಝಮಾಮ್ 10 ಶತಕ ಮತ್ತು 83 ಅರ್ಧಶತಕಗಳನ್ನು ಒಳಗೊಂಡ 11,739 ರನ್ ಗಳಿಸಿದ್ದರು. ಗರಿಷ್ಠ ವೈಯಕ್ತಿಕ ಸ್ಕೋರ್ 137 ರನ್.