ಉತ್ತಪ್ಪ ಅರ್ಧಶತಕ:ಕಿಂಗ್ಸ್ ಇಲೆವೆನ್‌ನ್ನು ಮಣಿಸಿದ ಕೆಕೆಆರ್
ಮೊಹಾಲಿ, ಎ.19: ಐಪಿಎಲ್ ಟ್ವೆಂಟಿ-20 ಟೂರ್ನಿಯ 13ನೆ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಲತಾ ನೈಟ್ ರೈಡರ್ಸ್ ತಂಡ 6 ವಿಕೆಟ್‌ಗಳ ಜಯ ಗಳಿಸಿದೆ.
ಇಲ್ಲಿನ ಚಂಡೀಗಡ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 139 ರನ್‌ಗಳ ಸವಾಲು ಪಡೆದ ಕೋಲ್ಕತಾ ನೈಟ್ ರೈಡರ್ಸ್ ತಂಡ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 141 ರನ್ ಗಳಿಸಿ ಗೆಲುವಿನ ದಡ ಸೇರಿತು.
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ 53 ರನ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಉತ್ತಪ್ಪ ಮತ್ತು ಗಂಭೀರ್ ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 82 ರನ್ ಸೇರಿಸುವ ಮೂಲಕ ತಂಡದ ಖಾತೆಗೆ ಉಪಯುಕ್ತ ಕೊಡುಗೆ ನೀಡಿದರು.
ತಂಡದ ಸಹಾ ಆಟಗಾರರಾದ ಮನೀಷ್ ಪಾಂಡೆ 12 ರನ್, ಯೂಸುಫ್ ಪಠಾಣ್ ಔಟಾಗದೆ 12 ರನ್, ಶಕೀಬ್ ಉಲ್ ಹಸನ್ 11 ರನ್ ಮತ್ತು ಎಸ್.ಎ. ಯಾದವ್ 11 ರನ್ ಗಳಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 138 ರನ್ ಗಳಿಸಿತ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್ ತಂಡಕ್ಕೆ ಶಾನ್ ಮಾರ್ಷ್ (56) ಅರ್ಧಶತಕ ದಾಖಲಿಸುವ ಮೂಲಕ ಸ್ಪರ್ಧಾತ್ಮಕ ಸವಾಲು ದಾಖಲಿಸಲು ನೆರವಾದರು.
ಮಾರ್ಷ್, ಮುರಳಿ ವಿಜಯ್(26) ಮತ್ತು ಅಬಾಟ್(12) ಇವರನ್ನು ಹೊರತುಪಡಿಸಿದರೆ ಉಳಿದ ಆಟಗಾರರಿಂದ ಎರಡಂಕೆಯ ಸ್ಕೋರ್ ದಾಖಲಾಗಲಿಲ್ಲ.
,,,,,,,,,
ಸ್ಕೋರ್ ಪಟ್ಟಿ
ಕಿಂಗ್ಸ್‌ಇಲೆವೆನ್ ಪಂಜಾಬ್ 20 ಓವರ್‌ಗಳಲ್ಲಿ 138/8
ವಿಜಯ್ ಬಿ ಚಾವ್ಲಾ 26
ಮನನ್ ವೋರಾ ಸಿ ಶಾಕಿಬ್ ಬಿ ಮೊರ್ಕಲ್08
ಶಾನ್ ಮಾರ್ಷ್ ಔಟಾಗದೆ56
ಮಿಲ್ಲರ್ ಸಿ ಉತ್ತಪ್ಪ ಬಿ ಪಠಾಣ್ 06
ಮ್ಯಾಕ್ಸ್‌ವೆಲ್ ಸಿ ಚಾವ್ಲಾ ಬಿ ನರೇನ್ 04
ಎ. ಪಟೇಲ್ ಸಿ ಯಾದವ್ ಬಿ ಯಾದವ್09
ಮೋಹಿತ್ ಶರ್ಮ ಸಿ ಉತ್ತಪ್ಪ ಬಿ ಮೊರ್ಕೆಲ್ 01
ಪಿ.ಸಾಹು ರನೌಟ್ (ರಸೆಲ್/ಉತ್ತಪ್ಪ)01
ಅಬಾಟ್ ಔಟಾಗದೆ12
ಇತರೆ07
ವಿಕೆಟ್ ಪತನ: 1-21, 2-47, 3-59, 4-72, 5-94, 6-108, 7-115, 8-118.
ಬೌಲಿಂಗ್ ವಿವರ
ಮೊರ್ಕೆಲ್4-0-27-2
ಯಾದವ್3-0-17-1
ಶಕೀಬ್ ಅಲ್ ಹಸನ್4-0-28-0
ನರೇನ್4-0-22-2
ಚಾವ್ಲಾ3-0-18-1
ಯು.ಪಠಾಣ್1-0-06-1
ರಸೆಲ್1-0-18-0
ಕೋಲ್ಕತಾ ನೈಟ್ ರೇಡರ್ಸ್ 17.1 ಓವರ್‌ಗಳಲ್ಲಿ 141/4
ಉತ್ತಪ್ಪ ಎಲ್‌ಬಿಡಬ್ಲು ಬಿ ಸಾಹು53
ಗಂಭೀರ್ ಸಿ ಮ್ಯಾಕ್ಸ್‌ವೆಲ್ ಬಿ ಸಾಹು34
ಪಾಂಡೆ ಬಿ ಪಟೇಲ್12
ಶಕೀಬ್ ಸಿ ಶರ್ಮ ಬಿ ಪಟೇಲ್11
ಎಸ್.ಯಾದವ್ ಔಟಾಗದೆ11
ಯು.ಪಠಾಣ್ ಔಟಾಗದೆ12
ಇತರೆ08
ವಿಕೆಟ್ ಪತನ:1-82, 2-97, 3-110, 4-123
ಬೌಲಿಂಗ್ ವಿವರ
ಸಂದೀಪ್ ಶರ್ಮ 2.0-0-21-0
ಅಬಾಟ್3.0-0-32-0
ಮೋಹಿತ್ ಶರ್ಮ3.1-0-29-0
ಅಕ್ಷರ್ ಪಟೇಲ್3.0-0-19-2
ಪಿ.ಸಾಹು4.0-0-18-2
ಮ್ಯಾಕ್ಸ್‌ವೆಲ್2.0-0-17-0
*ಪಂದ್ಯಶ್ರೇಷ್ಠ: ರಾಬಿನ್ ಉತ್ತಪ್ಪ