×
Ad

ಪುಣೆ ತಂಡಕ್ಕೆ ಉಸ್ಮಾನ್ ಖ್ವಾಜಾ ಸೇರ್ಪಡೆ

Update: 2016-04-27 23:14 IST

ಹೊಸದಿಲ್ಲಿ, ಎ.27: ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಗಾಯಗೊಂಡಿರುವ ಕೇವಿನ್ ಪೀಟರ್ಸನ್ ಬದಲಿಗೆ ಆಸ್ಟ್ರೇಲಿಯದ ದಾಂಡಿಗ ಉಸ್ಮಾನ್ ಖ್ವಾಜಾರನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿ ಬಯಸಿದೆ ಎಂದು ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್‌ನ ಕೋಚ್ ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿದ್ದಾರೆ.

ಐಪಿಎಲ್ ಟೂರ್ನಿಯ ವೇಳೆ ಗಾಯಗೊಂಡಿರುವ ಪೀಟರ್ಸನ್ ನವೆಂಬರ್ ತನಕ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆಯಿದೆ. ಪೀಟರ್ಸನ್‌ರಿಂದ ತೆರವಾದ ಸ್ಥಾನವನ್ನು ತುಂಬಬಲ್ಲ ಆಟಗಾರರ ಪಟ್ಟಿಯಲ್ಲಿ ಖ್ವಾಜಾ ಮೊದಲ ಆಯ್ಕೆಯಾಗಿದ್ದಾರೆ ಎಂದು ರವಿವಾರ ಕೆಕೆಆರ್ ವಿರುದ್ಧದ ಪಂದ್ಯದ ಬಳಿಕ ಸುದ್ದಿಗಾರರಿಗೆ ಫ್ಲೆಮಿಂಗ್ ತಿಳಿಸಿದ್ದಾರೆ.

ಖ್ವಾಜಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಈ ವರ್ಷದ ಬಿಗ್‌ಬ್ಯಾಶ್ ಟ್ವೆಂಟಿ-20 ಟೂರ್ನಿಯಲ್ಲಿ ಸಿಡ್ನಿ ಥಂಡರ್ ಪರವಾಗಿ 4 ಪಂದ್ಯಗಳನ್ನು ಆಡಿರುವ ಖ್ವಾಜಾ 2 ಅರ್ಧಶತಕ ಹಾಗೂ ಎರಡು ಶತಕಗಳ ಸಹಿತ 345 ರನ್ ಬಾರಿಸಿದ್ದರು. ಆ ಟೂರ್ನಿಯಲ್ಲಿ ಖ್ವಾಜಾ ಎರಡನೆ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಬಿಗ್‌ಬಾಶ್ ಟೂರ್ನಿಯಲ್ಲಿ ನೀಡಿರುವ ಪ್ರದರ್ಶನದ ಆಧಾರದ ಮೇಲೆ ಐಸಿಸಿ ಟ್ವೆಂಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿದ್ದ ಖ್ವಾಜಾ 4 ಪಂದ್ಯಗಳಲ್ಲಿ 143 ರನ್ ಗಳಿಸಿ ಆಸೀಸ್‌ನ ಪರ ಗರಿಷ್ಠ ಸ್ಕೋರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News