ಮುಂಬೈಗೆ ಮಾಲಿಂಗ ಬದಲಿಗೆ ಟೇಲರ್
Update: 2016-04-27 23:15 IST
ಮುಂಬೈ, ಎ.27: ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಗಾಯಾಳು ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಬದಲಿಗೆ ವೆಸ್ಟ್‌ಇಂಡೀಸ್‌ನ ವೇಗದ ಬೌಲರ್ ಜೆರೊಮ್ ಟೇಲರ್‌ರೊಂದಿಗೆ ಸಹಿ ಹಾಕಿದೆ.
ವಿವೊ ಐಪಿಎಲ್ 2016ರ ಟೂರ್ನಿಯ ಉಳಿದ ಪಂದ್ಯಗಳಿಗೆ ಗಾಯಾಳು ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗರ ಸ್ಥಾನಕ್ಕೆ ವೆಸ್ಟ್‌ಇಂಡೀಸ್‌ನ ವೇಗದ ಬೌಲರ್ ಜೆರೋಮ್ ಟೇಲರ್‌ರನ್ನು ಸೇರಿಸಿಕೊಳ್ಳಲಾಗಿದೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹೇಳಿದೆ. ಈ ಹಿಂದಿನ ಐಪಿಎಲ್‌ನಲ್ಲಿ ಪಂಜಾಬ್ ಹಾಗೂ ಪುಣೆ ಫ್ರಾಂಚೈಸಿಯನ್ನು ಪ್ರತಿನಿಧಿಸಿರುವ ಟೇಲರ್ ಈ ವರ್ಷ ಮುಂಬೈ ಪರ ಆಡಲು ಸಜ್ಜಾಗಿದ್ದಾರೆ.
2009ರಲ್ಲಿ ಮುಂಬೈ ಇಂಡಿಯನ್ಸ್ ಸೇರ್ಪಡೆಯಾಗಿದ್ದ ಮಾಲಿಂಗ 98 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಈ ವರ್ಷ ಟೂರ್ನಿ ಆರಂಭಕ್ಕೆ ಮೊದಲೇ ಮಂಡಿನೋವಿಗೆ ತುತ್ತಾಗಿದ್ದರು.