ಆರ್ಚರಿ ವಿಶ್ವಕಪ್: ಭಾರತದ ಮಹಿಳಾ ರಿಕರ್ವ್ ತಂಡ ಫೈನಲ್‌ಗೆ

Update: 2016-04-29 17:55 GMT

ಶಾಂೈ, ಎ.29: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಅಗ್ರ ಶ್ರೇಯಾಂಕದ ಜರ್ಮನಿ ತಂಡವನ್ನು 5-3 ಅಂತರದಿಂದ ಮಣಿಸಿರುವ ಭಾರತದ ಮಹಿಳಾ ರಿಕರ್ವ್ ತಂಡ ಫೈನಲ್‌ಗೆ ತಲುಪಿದೆ. ಫೈನಲ್‌ನಲ್ಲಿ ಚೈನೀಸ್ ತೈಪೆ ತಂಡದ ವಿರುದ್ಧ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದೆ.

ಭಾರತದ ಪುರುಷರ ತಂಡ ಪದಕದ ಭೇಟೆಯಲ್ಲಿದೆ. ಆದರೆ, ಕಂಪೌಂಡ್ ವಿಭಾಗದಲ್ಲಿ ಪದಕದ ಸುತ್ತಿಗೇರಲು ವಿಫಲವಾಗಿರುವ ಭಾರತದ ಆರ್ಚರಿಗಳು ಬರಿಗೈಯಲ್ಲಿ ವಾಪಸಾಗಿದ್ದಾರೆ.

ಗುರುವಾರ ವೈಯಕ್ತಿಕ ಸ್ಪರ್ಧೆಯ ಸೋಲಿನಿಂದ ಹೊರ ಬಂದಿರುವ ದೀಪಿಕಾ ಕುಮಾರಿ, ಲೈಶ್ರಾಮ್ ಬಾಂಬೆಲಾದೇವಿ ಹಾಗೂ ಲಕ್ಷ್ಮೀರಾಣಿ ಮಜ್ಹಿ ಸೆಮಿಫೈನಲ್‌ನಲ್ಲಿ ಜರ್ಮನಿ ಎದುರಾಳಿಯನ್ನು ಬಗ್ಗುಬಡಿದರು. ಮತ್ತೊಂದು ಸೆಮಿ ಫೈನಲ್‌ನಲ್ಲಿ ಚೈನೀಸ್ ತೈಪೆ ತಂಡ ಉನ್ನತ ರ್ಯಾಂಕಿನ ರಶ್ಯವನ್ನು 6-0 ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿತು.

ಅತನುದಾಸ್, ಜಯಂತ್ ತಾಲೂಕ್ದಾರ್ ಹಾಗೂ ಮಂಗಳ ಸಿಂಗ್ ಚಾಂಪಿಯಾ ಅವರಿದ್ದ ಭಾರತದ ಪುರುಷರ ರಿಕರ್ವ್ ತಂಡ ಸೆಮಿ ಫೈನಲ್‌ನಲ್ಲಿ ಹಾಲೆಂಡ್ ವಿರುದ್ಧ 5-4 ಅಂತರದಿಂದ ಸೋತಿದೆ. ಆದರೆ, ಕಂಚಿನ ಪದಕಕ್ಕಾಗಿ ಬ್ರಿಟನ್‌ನ ವಿರುದ್ಧ ಪ್ಲೆ-ಆಫ್ ಪಂದ್ಯವನ್ನು ಆಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News