ಐಸಿಸಿ ತಾರತಮ್ಯ ನೀತಿಗೆ ರಿಚರ್ಡ್ಸ್ ಆಕ್ರೋಶ

Update: 2016-04-29 17:58 GMT

  ಕಿಂಗ್ಸ್‌ಸ್ಟನ್, ಎ.29: ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್ ವಿರುದ್ಧ ಛೀಮಾರಿ ಹಾಕಿರುವ ಐಸಿಸಿ ವಿರುದ್ಧ ಗರಂ ಆಗಿರುವ ವಿಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್, ಡರೆನ್ ಸಮ್ಮಿ ಬಳಗ ಹಾಗೂ ಭಾರತೀಯ ಕ್ರಿಕೆಟ್ ತಂಡ ನಡುವೆ ಐಸಿಸಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಂಡೀಸ್‌ನ ಟ್ವೆಂಟಿ-20 ನಾಯಕ ಡರೆನ್ ಸಮ್ಮಿ, ಆಲ್‌ರೌಂಡರ್ ಡ್ವೇಯ್ನಿ ಬ್ರಾವೊ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ವಿಶ್ವಕಪ್ ಜಯಿಸಿದ ಬಳಿಕ ವಿಂಡೀಸ್ ಕ್ರಿಕೆಟ್ ಮಂಡಳಿಯ ಕಾರ್ಯವೈಖರಿಯನ್ನು ಬಹಿರಂಗವಾಗಿ ಟೀಕಿಸಿದ್ದರು.

ವಿಂಡೀಸ್ ಆಟಗಾರರ ಈ ವರ್ತನೆ ಅಗೌರವ, ಅಸಮರ್ಪಕವಾಗಿದೆ ಎಂದು ಹೇಳಿರುವ ಐಸಿಸಿ ವಿಂಡೀಸ್ ಆಟಗಾರರಿಗೆ ಛೀಮಾರಿ ಹಾಕಿತ್ತು.

‘‘ವಿಶ್ವ ಕ್ರಿಕೆಟ್‌ನಲ್ಲಿ ಒಂದೇ ಆಡಳಿತ ಮಂಡಳಿಯಿದ್ದರೆ, ಎಲ್ಲರೂ ಒಂದೇ ಛತ್ರದಡಿ ಬರುತ್ತಾರೆ. ಐಸಿಸಿಯ ಕೆಲವು ನಿಯಮವನ್ನು ಭಾರತದ ಆಟಗಾರರು ಪಾಲಿಸುತ್ತಿಲ್ಲ. ಅವರು ಇದನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದ್ದಾರೆೆ. ಐಸಿಸಿ ಎಲ್ಲ ಕ್ರಿಕೆಟ್ ಮಂಡಳಿಯೊಂದಿಗೆ ಒಂದೇ ನಿಯಮವನ್ನು ಹೊಂದಿಲ್ಲ’’ಎಂದು ರಿಚರ್ಡ್ಸ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News