ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡ ಸುಧಾ ಸಿಂಗ್
ಹೊಸದಿಲ್ಲಿ, ಎ.30: ಗುವಾಂಗ್ ಜೌ ಏಷ್ಯನ್ ಕೂಟದ 3000 ಮೀಟರ್ಸ್ ಸ್ಟೀಫಲ್‌ಚೇಸ್‌ನಲ್ಲಿ ಚಿನ್ನ ಜಯಿಸಿದ್ದ ಸುಧಾ ಸಿಂಗ್ ಇಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದು ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಂಡಿದ್ಧಾರೆ
ಉತ್ತರ ಪ್ರದೇಶದ ಅಥ್ಲೀಟ್ ಸುಧಾ ಸಿಂಗ್ 9 ನಿಮಿಷ 31.86 ಸೆಕೆಂಡುಗಳಲ್ಲಿ ಗುರಿ ತಲುಪಿದರು.
ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು 9 ನಿಮಿಷ 45.00 ಸೆಕೆಂಡುಗಳಲ್ಲಿ ಸುಧಾ ಸಿಂಗ್ ಗುರಿ ತಲುಪಬೇಕಿತ್ತು. ಈ ಸಾಧನೆ ಮಾಡಿದ್ದರಿಂದ ಅವರಿಗೆ ರಿಯೊ ಟಿಕೆಟ್ ಲಭಿಸಿತು. 9 ನಿಮಿಷ 27.09 ಸೆಕೆಂಡುಗಳಲ್ಲಿ ಗುರಿ ತಲುಪಿದ ಲಲಿತಾ ಬಾಬರ್ ಈ ವಿಭಾಗದ ಚಿನ್ನ ಗೆದ್ದುಕೊಂಡರು.
ಲಲಿತಾ ಬಾಬರ್ 3000 ಮೀಟರ್ಸ್ ಮತ್ತು ಮ್ಯಾರಥಾನ್‌ನಲ್ಲಿ ಈಗಾಗಲೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕಾರಣದಿಂದಾಗಿ ಅವರು ಈ ಸ್ಪರ್ಧೆಯಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಗುರಿ ತಲುಪಿದರು.3000 ಮೀಟರ್ಸ್ ಸ್ಟೀಫಲ್‌ಚೇಸ್‌ನಲ್ಲಿ ಲಲಿತಾ ಮತ್ತು ಸುಧಾ ಇಬ್ಬರೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಮ್ಯಾರಥಾನ್ ನಲ್ಲಿ ಲಲಿತಾಗೆ ಮಾತ್ರ ಒಲಿಂಪಿಕ್ಸ್ ಅವಕಾಶ ಲಭಿಸಲಿದೆ .