ಪಂಜಾಬ್ ತಂಡಕ್ಕೆ ಮುರಳಿ ವಿಜಯ್ ನಾಯಕ
Update: 2016-04-30 23:08 IST
ಮೊಹಾಲಿ, ಎ.30: ಒಂಬತ್ತನೆ ಆವೃತ್ತಿಯ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳಿಗೆ ಮುರಳಿ ವಿಜಯ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ವರೆಗೆ ನಾಯಕನಾಗಿದ್ದ ಡೇವಿಡ್ ಮಿಲ್ಲರ್ ತಂಡದಲ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ.
ಮಿಲ್ಲರ್ ತಂಡದ ಅವಿಭಾಜ್ಯ ಅಂಗವಾಗಿ ಮುಂದುವರಿಯಲಿದ್ದಾರೆ ಹಾಗೂ ಅವರು ತಂಡದ ಬಲಿಷ್ಠ ಆಟಗಾರನಾಗಿದ್ದಾರೆ ಎಂದು ಪಂಜಾಬ್ ಫ್ರಾಂಚೈಸಿ ಪ್ರಕಟನೆಯಲ್ಲಿ ತಿಳಿಸಿದೆ.
ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಪಂಜಾಬ್ ತಂಡ 6 ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನು ಗೆದ್ದುಕೊಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮೊಹಾಲಿಯಲ್ಲಿ ಎಂಎಸ್ ಧೋನಿ ನೇತೃತ್ವದ ಪುಣೆ ವಿರುದ್ಧ ಏಕೈಕ ಗೆಲುವು ಸಾಧಿಸಿತ್ತು. ಆ ನಂತರ ಸತತ ಸೋಲನುಭವಿಸಿದೆ.
ಈ ಬಾರಿಯ ಟೂರ್ನಿಯಲ್ಲಿ ಮಿಲ್ಲರ್ ನಾಯಕನಾಗಿ ವಿಫಲರಾಗಿದ್ದಲ್ಲದೆ ಬ್ಯಾಟಿಂಗ್‌ನಲ್ಲಿ ಕೇವಲ 76 ರನ್ ಗಳಿಸಿದ್ದರು. ಮತ್ತೊಂದೆಡೆ, ವಿಜಯ್ ಕೂಡ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದು ಕೇವಲ 143 ರನ್ ಗಳಿಸಿದ್ದಾರೆ.