ಅಕ್ಷರ್ ಪಟೇಲ್ ಹ್ಯಾಟ್ರಿಕ್: ಗುಜರಾತ್ ಲಯನ್ಸ್‌ಗೆ ಸೋಲುಣಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್
ಹೊಸದಿಲ್ಲಿ, ಮೆ 1: ಐಪಿಎಲ್‌ನ 28ನೆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಗುಜರಾತ್ ಲಯನ್ಸ್ ವಿರುದ್ಧ 19.5 ಓವರ್‌ನಲ್ಲಿ 154 ರನ್‌ಗೆ ಆಲೌಟ್ ಆಗಿತ್ತು.ಇದಕ್ಕುತ್ತರವಾಗಿ ಗುಜರಾತ್ ಲಯನ್ಸ್ ಒಂಬತ್ತು ವಿಕಟ್‌ನಷ್ಟದಲ್ಲಿ 131ರನ್‌ಗಳಿಗೆ ಸೋಲೊಪ್ಪಿಕೊಂಡಿದೆ.ಪರಿಣಾಮವಾಗಿ ಪಂಜಾಬ್ ತಂಡ 23 ರನ್‌ಗಳಿಂದ ವಿಜಯಿಯಾಗಿದೆ.
ಗುಜರಾತ್ ಲಯನ್ಸ್ ಐಪಿಲ್‌ನಲ್ಲಿ ಗರಿಷ್ಠ ವಿಜಯಾಗಿರುವ ತಂಡವಾಗಿದ್ದರೂ ಅಕ್ಷರ್ ಪಟೇಲ್‌ರ ಮಾರಕ ದಾಳಿಗೆ ಸಿಲುಕಿ ಅಪ್ಪಚ್ಚಿಯಾಯಿತು.ಅಕ್ಷರ್ ಹ್ಯಾಟ್ರಿಕ್ ವಿಕೆಟ್ ಗಳಿಸಿ ಕಿಂಗ್‌ಇಲೆವೆನ್ ಪಂಜಾಬನ್ನು ವಿಜಯದ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.ನಾಯಕ ಮುರಳಿ ವಿಜಯ್ ಅರ್ಧಶತಕ ಸಿಡಿಸಿದರು.ಆದ್ದರಿಂದ ಅಂಕ ಪಟ್ಟಿಯಲ್ಲಿ ತೀರ ಕೆಳಗಿರುವ ಕಿಂಗ್ಸ್‌ಇಲೆವೆನ್ ಲಯನ್ಸ್ ವಿರುದ್ಧ ಗೆಲುವು ಪಡೆಯಲು ಸಾಧ್ಯವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭದಲ್ಲಿ ವೇಗವಾಗಿ ರನ್‌ಗಳನ್ನು ಕಲೆಹಾಕಿತ್ತು. ಹೊಸ ನಾಯಕ ಮುರಳಿ ವಿಜಯ್‌ನಾಯಕನ ಆಟವಾಡಿ ಅರ್ಧ ಶತಕ ಸಿಡಿಸಿದ್ದರೆ ಇನ್ನೋರ್ವ ಆರಂಭಿಕ ಆಟಗಾರ ಎಸ್ಪಿ ಸ್ಟೋನಿಕ್ಸ್ ಉತ್ತಮವಾಗಿ ಆಡಿದರು. ಇಬ್ಬರು ಆಟಗಾರು ಓವರೊಂದಕ್ಕೆ ಹತ್ತು ರನ್‌ನಂತೆ ಗಳಿಸಿದರು. ಮೊದಲ ವಿಕೆಟ್‌ಗೆ ಆರಂಭಿಕ ಜೋಡಿ 40ಎಸೆತಗಳಲ್ಲಿ 64ರನ್‌ಗಳಿಸಿದರು. ಸ್ಟೊನಿಕ್ಸ್ 27ರನ್‌ಗಳಿಸಿ ರವೀಂದ್ರ ಜಡೇಜಾರ ಬಲೆಗೆ ಬಿದ್ದರು.
ಪಂಜಾಬ್‌ನ ಉತ್ತಮ ಆರಂಭವನ್ನು ಶಿವಿಲ್ ಕೌಸಿಕ್ ಮುರಿದರು.ಶಾನ್‌ಮಾರ್ಶ್‌ರನ್ನು ಅವರು ಔಟಾದರೆ ಗ್ಲೆನ್ ಮೆಕ್ಸ್‌ವೆಲ್ ಖಾತೆ ತೆರೆಯದೆ ಪೆವಿಲಿಯನ್ ತಲುಪಿದರು
. ಗುರುಕೀರತ್ ಸಿಂಗ್ ಮಾನ್ ರನೌಟ್ ಆಗುವುದರೊಂದಿಗೆ ಮೂರನೆ ವಿಕೆಟ್ ಪತನವಾಯಿತು.ನಂತರ ಡೇವಿಡ್ ಮಿಲ್ಲರ್ ವಿಕೆಟ್ ರಕ್ಷಿಸುವತ್ತ ಗಮನಕೊಟ್ಟು ನಿಧಾನವಾಗಿ ಆಡಿದರು
.ಬಹುದೊಡ್ಡ ರನ್ ಗಳಿಸುವ ನಿಟ್ಟಿನಲ್ಲಿ ಸಾಗಿದ್ದ ಪಂಜಾಬ್ ತಂಡವನ್ನು ಗುಜರಾತ್ ತಂಡದ ಬೌಲರ್‌ಗಳು ಮತ್ತು ಕ್ಷೇತ್ರರಕ್ಷಕರು ರನ್ ವೇಗವನ್ನು ನಿಯಂತ್ರಿಸುವಲ್ಲಿ ಸಫರಾದರು.
ಮಾಜಿ ನಾಯಕ ಮಿಲ್ಲರ್ 31ರನ್‌ಗಳಿಸಿದರೆ ವೃದ್ಧಿಮಾನ್ ಸಹಾ 33ರನ್‌ಗಳಿಸಿ ಡೆರೆನ್ ಬ್ರಾವೋರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.ಕೊನೆಯ ಓವರ್‌ನಲ್ಲಿ ವೇಗಿ ಪ್ರವೀಣ್‌ಕುಮಾರ್ ನಿರಂತರ ಹೊಡೆತ ನೀಡಿ ಗುಜರಾತ್‌ನ ಇನಿಂಗ್ಸ್‌ನ್ನು ಸಮಾಪ್ತಿ ಗೊಳಿಸಿದ್ದರು.
ಇದಕ್ಕೆ ಉತ್ತರಿಸಿದ ಗುಜರಾತ್ ಲಯನ್ಸ್‌ಗೆ ಆರಂಭದಲ್ಲಿ ಉತ್ತಮ ಆರಂಭ ದೊರೆಯಲಿಲ್ಲ.ಆರಂಭಿಕ ಬ್ರೆಂಡನ್ ಮೆಕಲಮ್ ಒಂದು ರನ್‌ಗಳಿಸಿದ್ದಾಗ ಮೋಹಿತ್ ಶರ್ಮಔಟ್ ಮಾಡಿದರು.
ತಂಡದ ರನ್ 21 ಆಗಿದ್ದಾಗ ನಾಯಕ ಸುರೇಶ್ ರೈನಾ(18)ರನ್ನು ಮೋಹಿತ್ ಶರ್ಮ ಕ್ಲೀನ್‌ಬೌಲ್ಡ್ ಮಾಡಿ ಎರಡನೇ ಬಲಿಪಡೆದರು.
ಡ್ವೇನ್ ಸ್ಮಿತ್‌ರನ್ನು ಅಕ್ಷರ್ ಪಟೇಲ್ ಕ್ಯಾಚ್‌ಕೊಡಿಸುವುದರೊಂದಿಗೆ ಮೂರನೆ ವಿಕೆಟ್ ಪತನವಾಯಿತು.ಇದೇ ಓವರ್‌ನಲ್ಲಿ ದಿನೇಶ್ ಕಾರ್ತಿಕ್ ಕ್ಲೀನ್ ಬೌಲ್ಡಾದರು.ಮುಂದಿನ ಎಸೆತದಲ್ಲಿ ಬ್ರಾವೊ ಕೂಡಾ ಕ್ಲೀನ್ ಬೌಲ್ಡಾದರು.
35ರನ್‌ಗೆ ಗುಜರಾತ್ ತಂಡ ಐದು ವಿಕೆಟ್‌ನ್ನು ಕಳೆದುಕೊಂಡಿತು. ಅಕ್ಷರ್ ಪಟೇಲ್ ಜಡೇಜರನ್ನು ಔಟ್ ಮಾಡಿ ಹ್ಯಾಟ್ರಿಕ್ ಗಳಿಸಿದರು.ಇದರೊಂದಿಗೆ ಐಪಿಎಲ್‌ನಲ್ಲಿ ಮೊದಲ ಬಾರಿ ಹ್ಯಾಟ್ರಿಕ್ ಗಳಿಸಿದ್ದಾರೆ, ಒಟ್ಟು ಹದಿನಾಲ್ಕು ಮಂದಿ ಐಪಿಎಲ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ್ದಾರೆ.