×
Ad

ಭಾರತದ ಇಬ್ಬರು ವೇಟ್‌ಲಿಫ್ಟರ್‌ಗೆ ಒಲಿಂಪಿಕ್ಸ್ ಟಿಕೆಟ್

Update: 2016-05-03 22:36 IST

ಹೊಸದಿಲ್ಲಿ, ಮೇ 3: ಉಜ್ಬೇಕಿಸ್ತಾನದ ಟಶ್‌ಕೆಂಟ್‌ನಲ್ಲಿ ಇತ್ತೀಚೆಗೆ ಕೊನೆಗೊಂಡ ಸೀನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಭಾರತದ ತಲಾ ಒಬ್ಬ ವೇಟ್‌ಲಿಫ್ಟರ್‌ಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಲಿಫ್ಟರ್‌ಗಳು ಒಟ್ಟು 100 ಅಂಕ ಗಳಿಸಿ ಮೂರನೆ ಸ್ಥಾನ ಪಡೆದರೆ, 129 ಅಂಕ ಗಳಿಸಿದ್ದ ಪುರುಷ ವೇಟ್ ಲಿಫ್ಟರ್‌ಗಳು ಆರನೆ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಹಿನ್ನೆಲೆಯಲ್ಲಿ ಭಾರತ ಆಗಸ್ಟ್‌ನಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ನಲ್ಲಿ ಎರಡು ಸ್ಥಾನ ಪಡೆದಿದೆ. ಭಾರತದ ವೇಟ್‌ಲಿಫ್ಟಿಂಗ್ ಫೆಡರೇಶನ್(ಐಡಬ್ಲುಎಲ್‌ಎಫ್) ಎಲ್ಲ ತೂಕ ವಿಭಾಗದಲ್ಲಿ ಟ್ರಯಲ್ಸ್‌ನ್ನು ನಡೆಸಿ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿರುವ ಓರ್ವ ಪುರುಷ ಹಾಗೂ ಮಹಿಳಾ ಲಿಫ್ಟರ್‌ನ್ನು ಆಯ್ಕೆ ಮಾಡಲಿದೆ.

ನಾವು ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ತಲಾ ಒಂದು ಸ್ಥಾನ ಪಡೆದಿದ್ದೇವೆ. ರಿಯೋ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಇಬ್ಬರು ಲಿಫ್ಟರ್‌ಗಳನ್ನು ಆಯ್ಕೆ ಮಾಡಲು ಟ್ರಯಲ್ಸ್ ನಡೆಸಲಿದ್ದೇವೆ ಎಂದು ಫೆಡರೇಶನ್ ಉಪಾಧ್ಯಕ್ಷ ಸಚ್‌ದೇವ್ ಯಾದವ್ ಹೇಳಿದ್ದಾರೆ.

ಎ.21 ರಿಂದ 30ರ ತನಕ ನಡೆದ ಸೀನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ಪೂನಮ್ ಯಾದವ್(63 ಕೆಜಿ) ಆರನೆ ಸ್ಥಾನ ಪಡೆದರೆ, ಸೈಖೋಮ್ ಮೀರಾಬಾಯ್ ಚಾನು(48ಕೆಜಿ) ಹಾಗೂ ಸಾಗೊಸೆಮ್ ಚಾನು(58 ಕೆಜಿ) ಏಳನೆ ಸ್ಥಾನ ಪಡೆದಿದ್ದಾರೆ. ಸಂಜಿತಾ ಚಾನು 9ನೆ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News