ಕಳೆದ ವರ್ಷ 58 ವೇಟ್‌ಲಿಫ್ಟರ್‌ಗಳು ಸಿಕ್ಕಿಬಿದ್ದಿದ್ದರು: ಕ್ರೀಡಾ ಸಚಿವ ಸೋನೊವಾಲ್

Update: 2016-05-03 17:12 GMT

ಹೊಸದಿಲ್ಲಿ, ಮೇ 3: ಕಳೆದ ವರ್ಷ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಸುಮಾರು 58 ವೇಟ್‌ಲಿಫ್ಟರ್‌ಗಳು ಸಿಕ್ಕಿಬಿದ್ದಿದ್ದರು ಎಂದು ಕ್ರೀಡಾ ಸಚಿವರಾದ ಸರ್ಬಾನಂದ ಸೋನೊವಾಲ್ ಲೋಕಸಭೆಗೆ ಮಂಗಳವಾರ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಇಂಡಿಯನ್ ವೇಟ್‌ಲಿಫ್ಟಿಂಗ್ ಫೆಡರೇಶನ್ ಹಾಗೂ ಇತರ ಕ್ರೀಡಾ ಸಂಸ್ಥೆಗಳು ಇತ್ತೀಚೆಗೆ ವೇಟ್‌ಲಿಫ್ಟರ್‌ಗಳು ಹಾಗೂ ಇತರ ಕ್ರೀಡಾಪಟುಗಳನ್ನು ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿದ ಆರೋಪದಲ್ಲಿ ಅಮಾನತುಗೊಳಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಸೋನೊವಾಲ್ ಉತ್ತರಿಸುತ್ತಿದ್ದರು.

 2015ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 58 ವೇಟ್‌ಲಿಫ್ಟರ್‌ಗಳು ಉದ್ದೀಪನಾ ಮದ್ದು ತಡೆ ನಿಯಮವನ್ನು ಉಲ್ಲಂಘಿಸಿದ್ದು ಪತ್ತೆಯಾಗಿದೆ. ಇವರ ವಿರುದ್ಧ ಶಿಸ್ತುಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸೊನೊವಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪುಣೆಯಲ್ಲಿ ಕಾಮನ್‌ವೆಲ್ತ್ ಸೀನಿಯರ್, ಜೂನಿಯರ್ ಹಾಗೂ ಯೂತ್ ಚಾಂಪಿಯನ್‌ಶಿಪ್‌ನ ವೇಳೆ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ನಡೆಸಿದ್ದ ಡೋಪಿಂಗ್ ಟೆಸ್ಟ್‌ನಲ್ಲಿ ಭಾರತದ ಇಬ್ಬರು ವೇಟ್‌ಲಿಫ್ಟರ್‌ಗಳು ಸಿಕ್ಕಿಬಿದ್ದಿದ್ದರು ಎಂದು ಸದನಕ್ಕೆ ಸೋನೊವಾಲ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News