ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್: ಅಗ್ರ ಸ್ಥಾನ ಕಳೆದುಕೊಂಡ ಭಾರತ

Update: 2016-05-04 17:29 GMT

ದುಬೈ, ಮೇ 4: ಭಾರತೀಯ ಕ್ರಿಕೆಟ್ ತಂಡ ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದೆಯಲ್ಲದೆ ಏಕದಿನ ರ್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ. ಭಾರತ ಟ್ವೆಂಟಿ-20 ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೆ ಕುಸಿದರೆ, ನ್ಯೂಝಿಲೆಂಡ್ ಇದೇ ಮೊದಲ ಬಾರಿ ನಂ.1 ಸ್ಥಾನಕ್ಕೇರಿದೆ.

ಏಕದಿನ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಅಗ್ರ ಎರಡು ಸ್ಥಾನವನ್ನು ಉಳಿಸಿಕೊಂಡಿವೆ. ಕಳೆದ ವರ್ಷ ಮೆಲ್ಬೋರ್ನ್‌ನಲ್ಲಿ ಐದನೆ ಬಾರಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಜಯಿಸಿದ್ದ ಆಸ್ಟ್ರೇಲಿಯ 124 ಅಂಕವನ್ನು ಗಳಿಸಿದೆ. ದಕ್ಷಿಣ ಆಫ್ರಿಕ 3ನೆ ಸ್ಥಾನಕ್ಕೇರಿದ್ದು, ಭಾರತ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ.

 ಏಕದಿನ ರ್ಯಾಂಕಿಂಗ್: 1. ಆಸ್ಟ್ರೇಲಿಯ, 2.ನ್ಯೂಝಿಲೆಂಡ್, 3. ದಕ್ಷಿಣ ಆಫ್ರಿಕ, 4. ಭಾರತ, 5. ಶ್ರೀಲಂಕಾ, 6. ಇಂಗ್ಲೆಂಡ್, 7. ಬಾಂಗ್ಲಾದೇಶ, 8. ವೆಸ್ಟ್‌ಇಂಡೀಸ್, 9.ಪಾಕಿಸ್ತಾನ, 10. ಅಫ್ಘಾನಿಸ್ತಾನ.

ಟ್ವೆಂಟಿ-20 ರ್ಯಾಂಕಿಂಗ್: 1. ನ್ಯೂಝಿಲೆಂಡ್, 2. ಭಾರತ, 3. ವೆಸ್ಟ್‌ಇಂಡೀಸ್, 4. ದಕ್ಷಿಣ ಆಫ್ರಿಕ, 5. ಇಂಗ್ಲೆಂಡ್, 6. ಆಸ್ಟ್ರೇಲಿಯ, 7.ಪಾಕಿಸ್ತಾನ, 8. ಶ್ರೀಲಂಕಾ, 9. ಅಫ್ಘಾನಿಸ್ತಾನ, 10. ಬಾಂಗ್ಲಾದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News