ತೆಂಡುಲ್ಕರ್ ಐಪಿಎಲ್ ದಾಖಲೆ ಮುರಿದ ಕೊಹ್ಲಿ
ನಾಯಕನಾಗಿ 3ನೆ ಬಾರಿ 500ಕ್ಕೂ ಅಧಿಕ ರನ್
ಬೆಂಗಳೂರು, ಮೇ 7: ಐಪಿಎಲ್ ಟೂರ್ನಿಯ ಮೂರು ವಿವಿಧ ಆವೃತ್ತಿಯಲ್ಲಿ ತಂಡದ ನಾಯಕನಾಗಿ 500ಕ್ಕೂ ಅಧಿಕ ರನ್ ಗಳಿಸಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್‌ರ ಐಪಿಎಲ್ ದಾಖಲೆಯನ್ನು ಮುರಿದಿದ್ದಾರೆ.
ಕೊಹ್ಲಿ ಆರ್‌ಸಿಬಿ ತಂಡದ ನಾಯಕನಾಗಿ 2013ರ ಐಪಿಎಲ್‌ನಲ್ಲಿ 634 ರನ್ ಹಾಗೂ 2015ರಲ್ಲಿ 505 ರನ್ ಗಳಿಸಿದ್ದರು. ಈ ವರ್ಷದ ಐಪಿಎಲ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಲು 67 ರನ್ ಅಗತ್ಯವಿತ್ತು.
ಪುಣೆ ವಿರುದ್ಧ ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಔಟಾಗದೆ 108 ರನ್ ಗಳಿಸಿದ ಕೊಹ್ಲಿ 3 ವಿವಿಧ ಐಪಿಎಲ್ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಕೊಹ್ಲಿ ಒಂದೇ ಋತುವಿನಲ್ಲಿ ಎರಡು ಶತಕ ಬಾರಿಸಿದ ಮೊದಲ ನಾಯಕನೆಂಬ ಕೀರ್ತಿಗೂ ಭಾಜನರಾಗಿದ್ದಾರೆ.
ಕೊಹ್ಲಿ ಐಪಿಎಲ್‌ನಲ್ಲಿ 4ನೆ ಬಾರಿ 500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಆರ್‌ಸಿಬಿ ನಾಯಕನಾಗುವ ಮೊದಲು 2011ರಲ್ಲಿ ಕೊಹ್ಲಿ 557 ರನ್ ಗಳಿಸಿದ್ದರು. ಸಚಿನ್ ತೆಂಡುಲ್ಕರ್ ನಾಯಕನಾಗಿ ಮುಂಬೈ ಇಂಡಿಯನ್ಸ್‌ನ ಪರ 2010ರ ಆವೃತ್ತಿಯಲ್ಲಿ 618 ರನ್, 2011ರಲ್ಲಿ 553 ರನ್ ಗಳಿಸಿದ್ದರು.