ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್: ಪಾಕಿಸ್ತಾನ ಚಾಂಪಿಯನ್
Update: 2016-05-07 22:37 IST
ಇಸ್ಲಾಮಾಬಾದ್, ಮೇ 7: ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾರತವನ್ನು ಸೋಲಿಸಿರುವ ಪಾಕಿಸ್ತಾನ ತಂಡ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.
ಇರಾನ್, ಅಫ್ಘಾನಿಸ್ತಾನ, ಶ್ರೀಲಂಕಾ ಹಾಗೂ ನೇಪಾಳ ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ಪಾಕ್ ತಂಡ ಭಾರತವನ್ನು 50-31 ಅಂಕಗಳ ಅಂತರದಿಂದ ಮಣಿಸಿತು.
ಭದ್ರತಾ ತಪಾಸಣೆಯನ್ನು ಮೀರಿ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಆಗಮಿಸಿದ್ದು, ಭಾರತ ಹಾಗೂ ಪಾಕಿಸ್ತಾನ ಸಾಂಪ್ರದಾಯಿಕ ಸರ್ಕಲ್ ಮಾದರಿಯಲ್ಲಿ ಪಂದ್ಯವನ್ನು ಆಡಿದ್ದವು.