×
Ad

ಮ್ಯಾಡ್ರಿಡ್ ಓಪನ್: ನಡಾಲ್-ಮರ್ರೆ ಸೆಮಿಫೈನಲ್ ಹೋರಾಟ

Update: 2016-05-07 22:38 IST

ಮ್ಯಾಡ್ರಿಡ್, ಮೇ 7: ಮ್ಯಾಡ್ರಿಡ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ರಫೆಲ್ ನಡಾಲ್ ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಅವರನ್ನು ಎದುರಿಸಲಿದ್ದಾರೆ.

ನಡಾಲ್ ಕ್ವಾರ್ಟರ್‌ಫೈನಲ್‌ನಲ್ಲಿ ಜಾವೊ ಸೌಸಾರನ್ನು 6-0, 4-6, 6-3 ಸೆಟ್‌ಗಳ ಅಂತರದಿಂದ ಮಣಿಸಿದರೆ, ಮರ್ರೆ ಮತ್ತೊಂದು ಪಂದ್ಯದಲ್ಲಿ ಥಾಮಸ್ ಬೆರ್ಡಿಕ್‌ರನ್ನು 6-3, 6-2 ಸೆಟ್‌ಗಳ ಅಂತರದಿಂದ ಮಣಿಸಿ ಸೆಮಿಫೈನಲ್‌ಗೆ ತಲುಪಿದ್ದಾರೆ.

ಕೆನಡಾದ ಮಿಲಾಸ್ ರಾವೊನಿಕ್‌ರನ್ನು 6-3, 6-4 ಸೆಟ್‌ಗಳ ಅಂತರದಿಂದ ಮಣಿಸಿರುವ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News