ಬ್ರೆಝಿಲ್ ಫುಟ್‌ಬಾಲ್ ಆಟಗಾರ ಆಡುತ್ತಿದ್ದಾಗಲೇ ಕುಸಿದು ಬಿದ್ದು ಮೃತ್ಯು!
ರಿಯೊ ಡಿಜನೈರೊ, ಮೇ 9: ಬ್ರೆಝಿಲ್ ಫುಟ್‌ಬಾಲ್ ತಾರೆ ಬೆರ್ನಾಡೊ ರಿಬರೊ ಫುಟ್‌ಬಾಲ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಮೃತರಾಗಿದ್ದಾರೆ. ಬ್ರೆಝಿಲಿಯನ್ ಟೀಮ್ ಫ್ರಿಬರ್‌ಗ್ಯೂನ್ಸೆಗೆ ಆಡುತ್ತಿದ್ದಾಗ ಆಕ್ರಮಣಕಾರಿ ಮಿಡ್‌ಫೀಲ್ಡರ್ ಆದ ಬೆರ್ನಾಡೊ ಕುಸಿದು ಬಿದ್ದರು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಿಲ್ಲ. ಎರಡು ದಿವಸಗಳ ಹಿಂದೆ ಕ್ಯಾಮರೂನ್ ಮಿಡ್‌ಫೀಲ್ಡರ್ ಪಾಟ್ರಿಕ್ ಎಕಾಂಗು ರುಮೇನಿಯನ್ ಲೀಗ್‌ನಲ್ಲಿ ಆಟವಾಡುತ್ತಿದ್ದಾಗ ಕುಸಿದು ಬಿದ್ದು ಮೃತರಾಗಿದ್ದರು. ಅವರು ಡೈನಾಮೊ ಬುಕರಸ್ಟಿನ್‌ನ ಆಟಗಾರ ಆಗಿದ್ದರು.
ಬೆರ್ನಾಡೊ ಮರಣಕ್ಕೆ ಹೃದಯಾಘಾತ ಕಾರಣವೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಒಂಬತ್ತನೆ ವಯಸ್ಸಿನಲ್ಲಿ ಪ್ಲೆಮಿಂಗೊ ಕ್ಲಬ್ ಸೇರಿದ್ದ ಬೆರ್ನಾಡೊ ಫ್ಲೆಮಿಂಗೊಕ್ಕಾಗಿ ಫಿಫದ ಯೂತ್ ಕಪ್‌ನಲ್ಲಿ ಆಡಿದ್ದರು. ಕೆಲವು ಕಾಲ ಇಟಲಿಯ ಅಲೆಬೆನಿಯದಲ್ಲಿಯೂ ಆಸ್ಟ್ರೇಲಿಯದ ಐ ಲೀಗ್ ಟೀಮ್‌ಆದ ನ್ಯೂಕಾಸಿಲ್ ಜಸ್ಟಿನ್‌ಗೂ ಜರ್ಸಿ ತೊಟ್ಟಿದ್ದಾರೆ. ಫಿನ್‌ಲೆಂಡ್‌ನ ಐ.ಎಫ್.ಕೆ ಮಾರಿಹಾಂಗೂ ಆಡಿದ ಬಳಿಕ ಸೀಝನ್‌ನಲ್ಲಿ ಬ್ರೆಝಿಲ್‌ಗೆ ಬೆರ್ನಾಡೊ ರಿಬರೊ ಮರಳಿದ್ದರು ಎಂದು ವರದಿಯಾಗಿದೆ.