ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮಿಂಚಲಿದೆ: ರಘುನಾಥ್
Update: 2016-05-10 22:40 IST
ಬೆಂಗಳೂರು, ಮಾ.10: ‘‘ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹಾಕಿ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಒಲಿಂಪಿಕ್ಸ್‌ಗೆ ಉತ್ತಮ ತಯಾರಿ ನಡೆಸಲಿದೆ’’ ಎಂದು ಹಿರಿಯ ಡಿಫೆಂಡರ್ ವಿ.ಆರ್. ರಘುನಾಥ್ ಹೇಳಿದ್ದಾರೆ.
‘‘2014ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಬಳಿಕ ಭಾರತ ತಂಡ ಮತ್ತೊಮ್ಮೆ ತನ್ನ ಮೇಲೆ ನಂಬಿಕೆ ಇಟ್ಟುಕೊಳ್ಳತೊಡಗಿತು. ನಾವು ಕೆಳ ಸ್ಥಾನಕ್ಕೆ ಇಳಿಯಲು ಇಷ್ಟಪಡಲಾರೆವು. 2014ರ ಮೊದಲು 12-13 ಸ್ಥಾನದಲ್ಲಿದ್ದೆವು. ಇದೀಗ ವಿಶ್ವದ ನಂ.7ನೆ ತಂಡವಾಗಿದ್ದೇವೆ. ಯಾವ ತಂಡವೂ ನಮ್ಮನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಮುಂಬರುವ ಟೂರ್ನಿಯಲ್ಲಿ ನಮಗೆ ಉಜ್ವಲ ಅವಕಾಶವಿದ್ದು, ಸರಿಯಾದ ದಿಕ್ಕಿಗೆ ಸಾಗುವ ವಿಶ್ವಾಸದಲ್ಲಿದ್ದೇವೆ’’ಎಂದು 27ರ ಹರೆಯದ ಕೊಡಗಿನ ಕುವರ ಅಭಿಪ್ರಾಯಪಟ್ಟರು.