×
Ad

ಅಗ್ರ ಸ್ಥಾನ ಕಾಯ್ದುಕೊಂಡ ಸಾನಿಯಾ-ಹಿಂಗಿಸ್

Update: 2016-05-10 22:41 IST

ಡಬ್ಲ್ಯುಟಿಎ ಡಬಲ್ಸ್ ರ್ಯಾಂಕಿಂಗ್:

ಹೊಸದಿಲ್ಲಿ, ಮೇ 10: ಸಾನಿಯಾ ಮಿರ್ಝಾ ಹಾಗೂ ಮಾರ್ಟಿನಾ ಹಿಂಗಿಸ್ ಅವರು ಡಬ್ಲ್ಯುಟಿಎ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಇಂಡೋ-ಸ್ವಿಸ್ ಜೋಡಿ ಸಾನಿಯಾ-ಹಿಂಗಿಸ್ ಇತ್ತೀಚೆಗೆ ನಡೆದ ಮ್ಯಾಡ್ರಿಡ್ ಓಪನ್ ಫೈನಲ್‌ನಲ್ಲಿ ಸೋತಿದ್ದರು. ಆದಾಗ್ಯೂ ತಲಾ 12045 ಅಂಕ ಗಳಿಸಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜರ್ಮನಿಯ ಆ್ಯಂಜೆಲಿಕ್ ಕರ್ಬರ್ ಎರಡನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News