×
Ad

ಕೊಹ್ಲಿ-ಡಿವಿಲಿಯರ್ಸ್‌ ಶತಕ: ಆರ್‌ಸಿಬಿಗೆ ಭರ್ಜರಿ ಜಯ

Update: 2016-05-14 21:02 IST

ಬೆಂಗಳೂರು, ಮೇ 14: ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಶತಕದ ಸಹಾಯದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇಲ್ಲಿ ನಡೆದ ಐಪಿಎಲ್‌ನ 44ನೆ ಪಂದ್ಯದಲ್ಲಿ ಗುಜರಾತ್ ಲಯನ್ಸ್ ವಿರುದ್ಧ 144 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 249 ರನ್‌ಗಳ ಸವಾಲನ್ನು ಪಡೆದ ಗುಜರಾತ್ ಲಯನ್ಸ್ ತಂಡ 18.4 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟಾಯಿತು. ಇದರೊಂದಿಗೆ ಆರ್‌ಸಿಬಿ ಐಪಿಎಲ್‌ನ ಇತಿಹಾಸದಲ್ಲೇ ಗರಿಷ್ಠ ಅಂತರದಲ್ಲಿ ಜಯ ಗಳಿಸಿತು. ಸ್ಟಾರ್ ಬ್ಯಾಟ್ಸ್‌ಮನ್ ಡಿವಿಲಿಯರ್ಸ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕ್ರಿಸ್ ಜೋರ್ಡನ್(11ಕ್ಕೆ 4), ವೈ.ಎಸ್.ಚಾಹಲ್ (19ಕ್ಕೆ 3), ಸಚಿನ್ ಬೇಬಿ(4ಕ್ಕೆ 2) ,ಎಸ್.ಅರವಿಂದ್ (15ಕ್ಕೆ 1) ಸಂಘಟಿತ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡವಿತು.
ಆ್ಯರೊನ್ ಫಿಂಚ್ 37 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ರವೀಂದ್ರ ಜಡೇಜ (21), ನಾಯಕ ಬ್ರೆಂಡನ್ ಮೆಕಲಮ್(11) ಎರಡಂಕೆಯ ಕೊಡುಗೆ ನೀಡಿದರು.
 ಡ್ವೇಯ್ನ ಸ್ಮಿತ್(7), ದಿನೇಶ್ ಕಾರ್ತಿಕ್(2), ಡೇಯ್ನಿ ಬ್ರಾವೊ(1), ಎ.ಡಿ.ನಾಥ್ (3), ಪಿ.ಕುಮಾರ್(1), ಧವಳ್ ಕುಲಕರ್ಣಿ (2) ಒಂದಕೆಯ ಕೊಡುಗೆ ನೀಡಿದರು.ವಿರಾಟ್ ಕೊಹ್ಲಿ 9 ಮಂದಿ ಬೌಲರ್‌ಗಳನ್ನು ದಾಳಿಗಿಳಿಸಿ ಗುಜರಾತ್ ತಂಡದ ಆಟಗಾರರನ್ನು ಒತ್ತಡಕ್ಕೆ ಸಿಲುಕಿಸಿ ಬೇಗನೆ ಪೆವಿಲಿಯನ್ ಸೇರಿದರು. ಸ್ಟಾರ್ ಆಟಗಾರ ಎ.ಬಿ.ಡಿವಿಲಿಯರ್ಸ್‌ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಹೊರತುಪಡಿಸಿ ತಂಡದ ಉಳಿದ ಎಲ್ಲ ಆಟಗಾರರು ಬೌಲಿಂಗ್ ನಡೆಸಿದ್ದರು.
ಆರ್‌ಸಿಬಿ 248: ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಆರ್‌ಸಿಬಿ ತಂಡ ಐಪಿಎಲ್ ಇತಿಹಾಸದಲ್ಲಿ ಎರಡನೆ ಬಾರಿ ಗರಿಷ್ಠ ರನ್ ದಾಖಲಿಸಿತು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 248 ರನ್ ಗಳಿಸಿತ್ತು. 2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಆರ್‌ಸಿಬಿ 5 ವಿಕೆಟ್ ನಷ್ಟದಲ್ಲಿ 263 ರನ್ ಗಳಿಸಿತ್ತು. ಆದರೆ ಈ ದಾಖಲೆಯನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ. ಕಳೆದ ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ 215 ದಾಖಲಿಸಿತ್ತು.

3.5 ಓವರ್‌ಗಳಲ್ಲಿ ತಂಡದ ಸ್ಕೋರ್ 19ಕ್ಕೆ ಏರುತ್ತಿದ್ದಂತೆ ಆರಂಭಿಕ ದಾಂಡಿಗ ಕ್ರಿಸ್ ಗೇಲ್(6) ಅವರು ಕುಲಕರ್ಣಿ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಎರಡನೆ ವಿಕೆಟ್‌ಗೆ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್‌ 229 ರನ್‌ಗಳ ಜೊತೆಯಾಟ ನೀಡಿದರು.
  ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ಮೂರನೆ ಶತಕ ದಾಖಸಿದರು. ಅವರು 55 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಲ್ಲಿ 109 ರನ್ ಗಳಿಸಿ ಔಟಾದರು.
ಎಬಿ ಡಿವಿಲಿಯರ್ಸ್‌ ಔಟಾಗದೆ 129 ರನ್(52ಎ, 10 ಬೌ,12ಸಿ) ಗಳಿಸಿ ಔಟಾಗದೆ ಉಳಿದರು. ಡಿವಿಲಿಯರ್ಸ್‌ 43 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್ ನೆರವಿನಲ್ಲಿ ಶತಕ ಗಳಿಸಿದರು. ಇದು ಐಪಿಎಲ್‌ನಲ್ಲಿ ವೇಗದ ಶತಕವಾಗಿದೆ. ಕೊಹ್ಲಿ 53 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದರು.

ಸ್ಕೋರ್ ವಿವರ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು:

20 ಓವರ್‌ಗಳಲ್ಲಿ 248/3

ಕ್ರಿಸ್ ಗೇಲ್ ಬಿ ಕುಲಕರ್ಣಿ 06

ವಿರಾಟ್ ಕೊಹ್ಲಿ ಸಿ ಬ್ರಾವೊ ಬಿ ಕುಮಾರ್ 109

ಎಬಿಡಿವಿಲಿಯರ್ಸ್ ಔಟಾಗದೆ 129

ವ್ಯಾಟ್ಸನ್ ಸಿ ಕಾರ್ತಿಕ್ ಬಿ ಕುಮಾರ್ 00

ಇತರ 04

ವಿಕೆಟ್ ಪತನ: 1-19, 2-248, 3-248

ಬೌಲಿಂಗ್ ವಿವರ:

ಪ್ರವೀಣ್ ಕುಮಾರ್ 4-1-45-2

ಧವಳ್ ಕುಲಕರ್ಣಿ 3-0-33-1

ಶಿವಿಲ್ ಕೌಶಿಕ್ 3-0-50-0

ಪ್ರವೀಣ್ ತಾಂಬೆ 2-0-25-0

ಡ್ವೇಯ್ನ ಬ್ರಾವೊ 3-0-46-0

ರವೀಂದ್ರ ಜಡೇಜ 4-0-34-0

ಡ್ವೇಯ್ನ ಸ್ಮಿತ್ 1-0-13-0

ಗುಜರಾತ್ ಲಯನ್ಸ್: 18.4 ಓವರ್‌ಗಳಲ್ಲಿ 104 ರನ್‌ಗೆ ಆಲೌಟ್

ಸ್ಮಿತ್ ಬಿ ಅರವಿಂದ್ 07

ಮೆಕಲಮ್ ಸಿ ಡಿವಿಲಿಯರ್ಸ್ ಬಿ ಚಾಹಲ್ 11

ರವೀಂದ್ರ ಜಡೇಜ ಸಿ ಮತ್ತು ಬಿ ಜೋರ್ಡನ್ 21

ಕಾರ್ತಿಕ್ ಸಿ ವಿಲಿಯರ್ಸ್ ಬಿ ಜೋರ್ಡನ್ 02

ಫಿಂಚ್ ಸಿ ಅರವಿಂದ್ ಬಿ ಸಚಿನ್ ಬೇಬಿ 37

ಬ್ರಾವೊ ಎಲ್‌ಬಿಡಬ್ಲು ಚಾಹಲ್ 01

ನಾಥ್ ಬಿ ಚಾಹಲ್ 03

ಪ್ರವೀಣ್ ಕುಮಾರ್ ಬಿ ಜೋರ್ಡನ್ 01

ಡಿಎಸ್ ಕುಲಕರ್ಣಿ ಬಿ ಜೋರ್ಡನ್ 2

ಪ್ರವೀಣ್‌ತಾಂಬೆ ಔಟಾಗದೆ 07

ಕೌಶಿಕ್ ಸಿ ಅರವಿಂದ್ ಬಿ ಸಚಿನ್ ಬೇಬಿ 00

ಇತರ 12

ವಿಕೆಟ್ ಪತನ: 1-9, 2-37, 3-44, 4-44, 5-47, 6-68, 7-69, 8-74, 9-104, 10-104.

ಬೌಲಿಂಗ್ ವಿವರ:

ಸ್ಟುವರ್ಟ್ ಬಿನ್ನಿ 2-0-13-0

ಅರವಿಂದ್ 3-0-15-1

ಚಾಹಲ್ 4-0-19-3

ವ್ಯಾಟ್ಸನ್ 1-0-3-0

ಜೋರ್ಡನ್ 3-0-11-4

ಆ್ಯರೊನ್ 2-0-19-0

ಕೊಹ್ಲಿ 1-0-13-0

ಗೇಲ್ 2-0-3-0

ಸಚಿನ್ ಬೇಬಿ 0.4-0-4-2.

ಪಂದ್ಯಶ್ರೇಷ್ಠ:ಎಬಿ ಡಿವಿಲಿಯರ್ಸ್

ಐಪಿಎಲ್: ಬೆಂಗಳೂರು-ಗುಜರಾತ್ ಪಂದ್ಯದ ಹೈಲೈಟ್ಸ್

2: ಟ್ವೆಂಟಿ-20 ಕ್ರಿಕೆಟ್ ಇತಿಹಾಸದಲ್ಲಿ ಇಬ್ಬರು ದಾಂಡಿಗರು ಒಂದೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದು ಇದು 2ನೆ ಸಲ. 2011ರಲ್ಲಿ ಕೇವಿನ್ ಒಬ್ರಿಯಾನ್(119) ಹಾಗೂ ಹಾಮಿಶ್ ಮಾರ್ಷಲ್(102)ಕೌಂಟಿ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದರು.

229: ವಿಲಿಯರ್ಸ್ ಹಾಗೂ ಕೊಹ್ಲಿ ಟಿ-20 ಇತಿಹಾದಲ್ಲಿ 2ನೆ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ್ದಾರೆ. 112: ಆರ್‌ಸಿಬಿ ಇನಿಂಗ್ಸ್‌ನ ಅಂತಿಮ 5 ಓವರ್‌ಗಳಲ್ಲಿ 112 ರನ್ ಗಳಿಸಿದ ಮೊದಲ ತಂಡ ಎನಿಸಿಕೊಂಡಿದೆ.

2: ಆರ್‌ಸಿಬಿ 18 ಹಾಗೂ 19ನೆ ಓವರ್‌ನಲ್ಲಿ ಕ್ರಮವಾಗಿ ಬ್ರಾವೊ ಹಾಗೂ ಶಿವಿಲಿ ಕೌಶಿಕ್ ಬೌಲಿಂಗ್‌ನಲ್ಲಿ ತಲಾ 30 ರನ್ ಗಳಿಸಿದೆ. ಇದು ಟ್ವೆಂಟಿ-20ಯಲ್ಲಿ ಕಂಡುಬಂದ ಮೊದಲ ದೃಷ್ಟಾಂತ. 2: ಆರ್‌ಸಿಬಿ 2ನೆ ಬಾರಿ ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದೆ.2013ರಲ್ಲಿ ಪುಣೆ ವಾರಿಯರ್ಸ್‌ ವಿರುದ್ಧ ಕ್ರಿಸ್ ಗೇಲ್ ಔಟಾಗದೆ 175 ರನ್ ನೆರವಿನಿಂದ 5 ವಿಕೆಟ್‌ಗೆ 263 ರನ್ ಗಳಿಸಿತ್ತು.

20: ಆರ್‌ಸಿಬಿ ದಾಂಡಿಗರು ಒಟ್ಟು 20 ಸಿಕ್ಸರ್ ಬಾರಿಸಿದರು.

4: ಪ್ರಸ್ತುತ ಐಪಿಎಲ್‌ನಲ್ಲಿ ಕೊಹ್ಲಿ ಹಾಗೂ ವಿಲಿಯರ್ಸ್ ನಾಲ್ಕನೆ ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡರು.

144: ಆರ್‌ಸಿಬಿ ಐಪಿಎಲ್‌ನಲ್ಲಿ ದೊಡ್ಡ ಅಂತರದ ಜಯ ದಾಖಲಿಸಿದೆ. 2008ರ ಮೊದಲ ಪಂದ್ಯದಲ್ಲಿ ಕೋಲ್ಕತಾ 140 ರನ್‌ನಿಂದ ಗೆಲುವು ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News