×
Ad

ಒಲಿಂಪಿಕ್ಸ್‌ಗೆ ದೀಪಿಕಾ ಕುಮಾರಿ

Update: 2016-05-16 23:54 IST

 ಹೊಸದಿಲ್ಲಿ, ಮೇ 16: ದೀಪಿಕಾ ಕುಮಾರಿ, ಬಾಂಬೆಲಾದೇವಿ ಹಾಗೂ ಲಕ್ಷ್ಮೀರಾಣಿ ಅವರನ್ನೊಳಗೊಂಡ ಭಾರತದ ಮೂವರು ಮಹಿಳಾ ಆರ್ಚರಿ ತಂಡ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.

ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಆಯ್ಕೆಯ ಟ್ರಯಲ್ಸ್‌ನ ಬಳಿಕ ಸೋಮವಾರ ರಿಯೋ ಒಲಿಂಪಿಕ್ಸ್‌ಗೆ ಈ ಮೂವರನ್ನು ಹೆಸರಿಸಲಾಯಿತು. ಆಗಸ್ಟ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಮೂವರು ಮಹಿಳೆಯರು ವೈಯಕ್ತಿಕ ಹಾಗೂ ಟೀಮ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಆರು ಹಂತದ ಆಯ್ಕೆಯ ಟ್ರಯಲ್ಸ್ ಹಾಗೂ ತರಬೇತಿಯು ಕಳೆದ ಮೂರೂವರೆ ತಿಂಗಳಿಂದ ಜೆಮ್ಶೆಡ್‌ಪುರ, ದಿಲ್ಲಿ ಹಾಗೂ ಬೆಂಗಳೂರಿನಲ್ಲಿ ನಡೆದಿದ್ದು, ಭಾರತದ ಆರ್ಚರಿ ಸಂಸ್ಥೆ ರಿಯೋ ಒಲಿಂಪಿಕ್ ಗೇಮ್ಸ್‌ಗೆ ಮೂವರು ಸದಸ್ಯರ ಮಹಿಳಾ ತಂಡವನ್ನು ಆಯ್ಕೆ ಮಾಡಿದೆ ಎಂದು ಎಎಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News