×
Ad

ಐಪಿಎಲ್‌ನಿಂದ ಹೊರ ನಡೆದ ಮ್ಯಾಕ್ಸ್‌ವೆಲ್

Update: 2016-05-17 23:46 IST

ಸಿಡ್ನಿ, ಮೇ 17: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದ ಸಮಸ್ಯೆಯಿಂದಾಗಿ ಈಗ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ.

ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯಿಂದ ಹೊರ ನಡೆಯುತ್ತಿರುವ ಆಸ್ಟ್ರೇಲಿಯದ ಐದನೆ ಆಟಗಾರನಾಗಿದ್ದಾರೆ. ಗಾಯಗೊಂಡಿರುವ ಮ್ಯಾಕ್ಸ್‌ವೆಲ್ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯ ತಂಡದಿಂದಲೂ ಹೊರಗುಳಿದಿದ್ದಾರೆ.

 ಮ್ಯಾಕ್ಸ್‌ವೆಲ್‌ಗೆ ಪಂಜಾಬ್ ಪರ ಆಡುವಾಗ ಗಾಯವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಪಂಜಾಬ್ ತಂಡ ರವಿವಾರ ಹೈದರಾಬಾದ್‌ನ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಸೋಲುವ ಮೂಲಕ ಐಪಿಎಲ್ ಪ್ಲೇ-ಆಫ್ ಸ್ಪರ್ಧೆಯಿಂದ ಹೊರ ನಡೆದಿದೆ.

ನಮಗೆ ಲಭಿಸಿದ ಮಾಹಿತಿ ಪ್ರಕಾರ, ಮ್ಯಾಕ್ಸ್‌ವೆಲ್‌ಗೆ ಆಗಿರುವ ಗಾಯವು ಜೂ.6 ರಿಂದ ಆರಂಭವಾಗಲಿರುವ ವೆಸ್ಟ್‌ಇಂಡೀಸ್ ವಿರುದ್ಧದ ತ್ರಿಕೋನ ಸರಣಿಯಿಂದ ಹೊರ ನಡೆಯುವಷ್ಟು ಗಂಭೀರವಾಗಿಲ್ಲ.

ವೆಸ್ಟ್‌ಇಂಡೀಸ್‌ಗೆ ತೆರಳುವ ಮೊದಲು ಅವರಿಗೆ ಸಾಕಷ್ಟು ಸಮಯಾವಕಾಶ ನೀಡಲಿದ್ದೇವೆ ಎಂದು ಆಸ್ಟ್ರೇಲಿಯದ ತಂಡದ ಫಿಸಿಯೋ ಡೇವಿಡ್ ಬ್ರೆಕ್ಲೆ ಹೇಳಿದ್ದಾರೆ.

ಮ್ಯಾಕ್ಸ್‌ವೆಲ್ ಐಪಿಎಲ್ ಟೂರ್ನಿಯನ್ನು ಅರ್ಧದಲ್ಲೇ ತೊರೆಯುತ್ತಿರುವ ಆಸ್ಟ್ರೇಲಿಯದ 5ನೆ ಆಟಗಾರ. ಆಸೀಸ್ಞ್‌ ನಾಯಕ ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್, ಜಾನ್ ಹೇಸ್ಟಿಂಗ್ಸ್ ಹಾಗೂ ಶಾನ್ ಮಾರ್ಷ್ ಗಾಯದ ಸಮಸ್ಯೆಗೆ ಸಿಲುಕಿ ತವರಿಗೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News