ಚಾಂಪಿಯನ್ಸ್ ಟ್ರೋಫಿಗೆ ಭಾರತದ ಹಾಕಿ ತಂಡ ಪ್ರಕಟ
ಸರ್ದಾರ್‌ಗೆ ವಿಶ್ರಾಂತಿ, ಶ್ರೀಜೇಶ್ ನಾಯಕ
ಹೊಸದಿಲ್ಲಿ, ಮೇ 17: ಮುಂದಿನ ತಿಂಗಳು ಲಂಡನ್‌ನಲ್ಲಿ ಆರಂಭವಾಗಲಿರುವ ಎಫ್‌ಐಎಚ್ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಸಮಿತಿಯು ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ.
ಖಾಯಂ ನಾಯಕ ಸರ್ದಾರ್ ಸಿಂಗ್ ಹಾಗೂ ಡ್ರಾಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್‌ಗೆ ವಿಶ್ರಾಂತಿ ನೀಡಿರುವ ಆಯ್ಕೆ ಸಮಿತಿಯು ಗೋಲುಕೀಪರ್ ಪಿ.ಆರ್.ಶ್ರೀಜೇಶ್‌ಗೆ ನಾಯಕತ್ವದ ಜವಾಬ್ದಾರಿ ನೀಡಿದೆ.
ಚಾಂಪಿಯನ್ಸ್ ಟ್ರೋಫಿ ಜೂ.10 ರಿಂದ 17ರ ತನಕ ನಡೆಯಲಿದೆ.
ರಿಯೋ ಒಲಿಂಪಿಕ್ಸ್‌ಗೆ ಮೊದಲು ಇದು ಭಾರತದ ಕೊನೆಯ ಟೂರ್ನಿಯಾಗಿದ್ದು, ಒಲಿಂಪಿಕ್ಸ್‌ನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ದಾರ್‌ಗೆ ವಿಶ್ರಾಂತಿ ನೀಡಲಾಗಿದೆ. ಕಳೆದ ಕೆಲವು ಸಮಯದಿಂದ ನಿರಂತರವಾಗಿ ಆಡುತ್ತಿರುವ ಸರ್ದಾರ್‌ರನ್ನು ಚಾಂಪಿಯನ್ಸ್ ಟ್ರೋಫಿಗೆ ವಿಶ್ರಾಂತಿ ನೀಡುವ ಬಗ್ಗೆ ಪೂರ್ವ ನಿಗದಿಯಾಗಿತ್ತು.
ಸರ್ದಾರ್ ಸಿಂಗ್ ಅಝ್ಲೆನ್ ಷಾ ಹಾಕಿ ಟೂರ್ನಿಯಲ್ಲಿ ಆಡಿದ್ದರು. ಶ್ರೀಜೇಶ್‌ಗೆ ವಿಶ್ರಾಂತಿ ನೀಡಲಾಗಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಶ್ರೀಜೇಶ್ ತಂಡವನ್ನು ಮುನ್ನಡೆಸಲಿದ್ದು, ಸರ್ದಾರ್‌ಗೆ ಅಗತ್ಯದ ವಿಶ್ರಾಂತಿ ನೀಡಲಾಗಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ನರೇಂದರ್ ಬಾತ್ರಾ ಹೇಳಿದ್ದಾರೆ.
ಕನ್ನಡಿಗ ಎಸ್‌ವಿ ಸುನೀಲ್ ಉಪ ನಾಯಕನಾಗಿ ಆಯ್ಕೆಯಾಗಿದ್ದು, ಹಿರಿಯ ಆಟಗಾರರಾದ ವಿಆರ್ ರಘುನಾಥ್, ಕೊಥಜಿತ್ ಸಿಂಗ್, ಎಸ್‌ಕೆ ಉತ್ತಪ್ಪ, ಆಕಾಶ್‌ದೀಪ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಝ್ಲನ್ ಹಾಕಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ತಂಡ ಬೆಳ್ಳಿ ಪದಕ ಜಯಿಸಲು ನೆರವಾಗಿದ್ದ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಸ್ಥಾನ ಕಾಯ್ದುಕೊಂಡಿದ್ದಾರೆ.
ಹಾಕಿ ತಂಡ: ಪಿ.ಆರ್.ಶ್ರೀಜೇಶ್(ಗೋಲ್‌ಕೀಪರ್), ವಿಕಾಸ್ ದಹಿಯಾ, ಪ್ರದೀಪ್ ಮೋರ್, ವಿ.ಆರ್.ರಘುನಾಥ್, ಕೋಥಜಿತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್‌ಪ್ರೀತ್ ಸಿಂಗ್, ದನೀಶ್ ಮುಜ್ತಾಬ, ಚಿಂಗ್ಲೆನ್‌ಸನಾ ಸಿಂಗ್, ಮನ್‌ಪ್ರೀತ್ ಸಿಂಗ್, ಎಸ್..ೆ ಉತ್ತಪ್ಪ, ದೇವೇಂದರ್ ವಾಲ್ಮೀಕಿ, ಹರ್ಜೀತ್ ಸಿಂಗ್, ತಲ್ವೀಂದರ್ ಸಿಂಗ್, ,ಮನ್‌ದೀಪ್ ಸಿಂಗ್, ಎಸ್.ವಿ. ಸುನೀಲ್(ಉಪ ನಾಯಕ), ಆಕಾಶ್‌ದೀಪ್ ಸಿಂಗ್, ನಿಕ್ಕಿನ್ ತಿಮ್ಮಯ್ಯ.