×
Ad

ಬೈಲಿ ತಲೆಯಿಂದ ಹೆಲ್ಮೆಟ್‌ ಹಾರಿಸಿದ ನೀಲ್‌ ಚೆಂಡು... !

Update: 2016-05-18 12:52 IST

ಹೊಸದಿಲ್ಲಿ, ಮೇ18: ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಬೌಲರ್‌ ನಥನ್‌ ಕೌಲ್ಟರ್‌ ನೀಲ್‌ ಹಾರಿಸಿದ ಚೆಂಡು ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡದ ಬ್ಯಾಟ್ಸ್ ಮನ್‌ ಆಸ್ತ್ರೇಲಿಯದ ಜಾರ್ಜ್‌ ಬೈಲಿ ಅವರ ಹೆಲ್ಮೆಟ್‌ನ್ನು ಹಾರಿಸಿದ ಘಟನೆ ಮಂಗಳವಾರ ಡೆಲ್ಲಿ ಮತ್ತು ಪುಣೆ ತಂಡಗಳ ನಡುವಿನ 19ನೆ ಐಪಿಎಲ್‌ ಪಂದ್ಯದಲ್ಲಿ ಸಂಭವಿಸಿದೆ.
ಬೈಲಿ ತಲೆಯಿಂದ  ಹೆಲ್ಮೆಟ್‌ ಹಾರಿ ಹೋಗಿದ್ದರೂ, ಬೈಲಿಗೆ ಯಾವುದೇ  ಹಾನಿಯಾಗಿಲ್ಲ. ಅವರು ಅಪಾಯದಿಂದ ಪಾರಾಗಿದ್ದಾರೆ.
ನೀಲ್‌ ಎಸೆದ ಏಳನೆ ಓವರ್‌ನ ಕೊನೆಯ ಎಸೆತವನ್ನು  ಬೈಲಿ ರಕ್ಷಣಾತ್ಮಕವಾಗಿ ಎದುರಿಸಲು ಯತ್ನಿಸಿದರು. ಆದರೆ ಚೆಂಡು ಅವರ ಬ್ಯಾಟ್‌ ಸಿಗಲಿಲ್ಲ. ಶಾರ್ಟ್‌ ಬಾಲ್‌  ಅವರ ಹೆಲ್ಮೆಟ್‌ ನ್ನು  ತಲೆಯಿಂದ ಹಾರಿಸಿತು.  ಹೆಲ್ಮೆಟ್‌ ತಲೆಯಿಂದ ಹಾರಿ ವಿಕೆಟ್‌ನ  ಹಿಂದುಗಡೆ ಬಿತ್ತು. ಡೇರ್‌ಡೆವಿಲ್ಸ್‌ನ ಆಟಗಾರರು ಕೂಡಲೇ ಬೈಲಿ ಬಳಿ ಧಾವಿಸಿ ಬಂದರು. ಬೈಲಿಗೆ ಏನು ಆಗಿಲ್ಲ ಎಂದು ಗೊತ್ತಾದ ಬಳಿಕ ಆಟ ಮುಂದುವರಿಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News