ಪ್ರಥಮ ಟೆಸ್ಟ್: ಇಂಗ್ಲೆಂಡ್ 298 ರನ್
ಲೀಡ್ಸ್, ಮೇ 20: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಜೋನಾಥನ್ ಬೈರ್‌ಸ್ಟೋ ಶತಕ (140 ರನ್) ಹಾಗೂ ಆರಂಭಿಕ ದಾಂಡಿಗ ಹೇಲ್ಸ್(86) ಅರ್ಧಶತಕದ ಕೊಡುಗೆಯ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 298 ರನ್ ಗಳಿಸಿ ಆಲೌಟಾಗಿದೆ.
ಟಾಸ್ ಜಯಿಸಿದ ಶ್ರೀಲಂಕಾ ತಂಡ ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಇಳಿಸಿತು. ನಾಯಕ ಕುಕ್(16) ಹಾಗೂ ಹೇಲ್ಸ್ ಮೊದಲ ವಿಕೆಟ್‌ಗೆ 49 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಒಂದು ಹಂತದಲ್ಲಿ 1 ವಿಕೆಟ್‌ಗೆ 49 ರನ್ ಗಳಿಸಿದ್ದ ಇಂಗ್ಲೆಂಡ್ 83 ರನ್ ತಲುಪುವಷ್ಟರಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ಆಗ 6ನೆ ವಿಕೆಟ್‌ಗೆ 141 ರನ್ ಗಳಿಸಿದ ಹೇಲ್ಸ್ ಹಾಗೂ ಬೈರ್‌ಸ್ಟೋ ತಂಡದ ಮೊತ್ತವನ್ನು 224ಕ್ಕೆ ತಲುಪಿಸಿದರು. ಹೇಲ್ಸ್ ಔಟಾದ ಬಳಿಕ ಫಿನ್(17) ಅವರೊಂದಿಗೆ 9ನೆ ವಿಕೆಟ್‌ಗೆ 54 ರನ್ ಸೇರಿಸಿದ ಬೈರ್‌ಸ್ಟೋ ಇಂಗ್ಲೆಂಡ್ 298 ರನ್ ಗಳಿಸಲು ನೆರವಾದರು. ಶ್ರೀಲಂಕಾದ ಪರ ಚಾಮೀರಾ(3-64), ಶನಕಾ(3-46) ತಲಾ 3 ವಿಕೆಟ್ ಪಡೆದರು.