×
Ad

ಕಪಿಲ್‌ದೇವ್ ದಾಖಲೆ ಮುರಿದ ಜೇಮ್ಸ್ ಆ್ಯಂಡರ್ಸನ್

Update: 2016-05-21 17:34 IST

ಲಂಡನ್, ಮೇ 21: ಇಂಗ್ಲೆಂಡ್‌ನ ಹಿರಿಯ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಶ್ರೀಲಂಕಾದ ವಿರುದ್ಧ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಗೊಂಚಲನ್ನು ಪಡೆಯುವ ಮೂಲಕ ಭಾರತದ ಆಲ್‌ರೌಂಡರ್ ದಂತಕತೆ ಕಪಿಲ್‌ದೇವ್ ದಾಖಲೆಯನ್ನು ಮುರಿದಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ 16 ರನ್‌ಗೆ 5 ವಿಕೆಟ್‌ಗಳನ್ನು ಉರುಳಿಸಿದ ಆ್ಯಂಡರ್ಸನ್ ಶ್ರೀಲಂಕಾವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 91 ರನ್‌ಗೆ ಆಲೌಟ್ ಮಾಡಲು ನೆರವಾಗಿದ್ದರು.

  ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 438 ವಿಕೆಟ್‌ಗಳನ್ನು ಪಡೆದ ಆ್ಯಂಡರ್ಸನ್ ಅವರು ಕಪಿಲ್‌ದೇವ್ 131 ಟೆಸ್ಟ್‌ನಲ್ಲಿ ಉರುಳಿಸಿದ್ದ 434 ವಿಕೆಟ್‌ಗಳ ದಾಖಲೆಯನ್ನು ಅಳಿಸಿ ಹಾಕಿದರು. ಆ್ಯಂಡರ್ಸನ್ 113ನೆ ಟೆಸ್ಟ್‌ನಲ್ಲಿ ಕಪಿಲ್‌ದೇವ್ ದಾಖಲೆಯನ್ನು ಮುರಿದಿದ್ದು, ಟೆಸ್ಟ್‌ನಲ್ಲಿ 19ನೆ ಬಾರಿ ಐದು ವಿಕೆಟ್ ಗೊಂಚಲು ಸಂಪಾದಿಸಿದರು.

ಆ್ಯಂಡರ್ಸನ್ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿದ್ದಾರೆ. ಮುತ್ತಯ್ಯ ಮುರಳೀಧರನ್, ಶೇನ್ ವಾರ್ನ್, ಅನಿಲ್ ಕುಂಬ್ಳೆ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕೋರ್ಟ್ನಿ ವಾಲ್ಶ್ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News