×
Ad

ಗುಜರಾತ್‌ ಪ್ಲೇ ಆಫ್‌ಗೆ ತೇರ್ಗಡೆ

Update: 2016-05-21 23:52 IST

ಸುರೇಶ್ ರೈನಾ ಆಕರ್ಷಕ ಅರ್ಧಶತಕ

 ಕಾನ್ಪುರ, ಮೇ 21: ನಾಯಕ ಸುರೇಶ್ ರೈನಾ ಹಾಗೂ ಬ್ರೆಂಡನ್ ಮೆಕಲಮ್ 2ನೆ ವಿಕೆಟ್‌ಗೆ ಸೇರಿಸಿದ 96 ರನ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಸಹಾಯದಿಂದ ಗುಜರಾತ್ ಲಯನ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಐಪಿಎಲ್‌ನ 54ನೆ ಪಂದ್ಯದಲ್ಲಿ 6 ವಿಕೆಟ್‌ಗಳ ಅಂತರದಿಂದ ಮಣಿಸಿತು.

ಶನಿವಾರ ಇಲ್ಲಿನ ಗ್ರೀನ್‌ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈಯನ್ನು ಮಣಿಸಿರುವ ಗುಜರಾತ್ 14 ಪಂದ್ಯಗಳಲ್ಲಿ 9ನೆ ಜಯ ಸಾಧಿಸಿ 18 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. 9ನೆ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೆ ತೇರ್ಗಡೆಯಾದ ಮೊದಲ ತಂಡ ಎನಿಸಿಕೊಂಡಿತು.

ಗೆಲ್ಲಲು 173 ರನ್ ಕಠಿಣ ಗುರಿ ಪಡೆದಿದ್ದ ಗುಜರಾತ್ ಮೊದಲ ಓವರ್‌ನ 2ನೆ ಎಸೆತದಲ್ಲಿ ಆ್ಯರೊನ್ ಫಿಂಚ್(0) ವಿಕೆಟ್‌ನ್ನು ಕಳೆದುಕೊಂಡಿತು. ಆಗ 2ನೆ ವಿಕೆಟ್‌ಗೆ 9.2 ಓವರ್‌ಗಳಲ್ಲಿ 96 ರನ್ ಜೊತೆಯಾಟ ನಡೆಸಿದ ರೈನಾ(58 ರನ್, 36 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಮೆಕಲಮ್(48 ರನ್, 27 ಎಸೆತ, 8 ಬೌಂಡರಿ, 1ಸಿಕ್ಸರ್) ತಂಡವನ್ನು ಗೆಲುವಿನ ಹಳಿಗೆ ತಂದರು.

ಈ ಇಬ್ಬರು ಔಟಾದ ಬಳಿಕ ಡ್ವೇಯ್ನ ಸ್ಮಿತ್(ಔಟಾಗದೆ 37) ಹಾಗೂ ರವೀಂದ್ರ ಜಡೇಜ(ಔಟಾಗದೆ 21) 5ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 58 ರನ್ ಸೇರಿಸಿ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ತಂಡದ ಗೆಲುವಿನ ರೂವಾರಿ ಸುರೇಶ್ ರೈನಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮುಂಬೈನ ಪರ ವಿನಯಕುಮಾರ್(2-17) ಯಶಸ್ವಿ ಬೌಲರ್ ಎನಿಸಿಕೊಂಡರು.

ಮುಂಬೈ 172/8: ಇದಕ್ಕೆ ಮೊದಲು ನಿತೀಶ್ ರಾಣಾ ಬಾರಿಸಿದ ಚೊಚ್ಚಲ ಅರ್ಧಶತಕದ ಬೆಂಬಲದಿಂದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡದ ಗೆಲುವಿಗೆ 173 ರನ್ ನೀಡಿದೆ.

 ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡ ತಲಾ 2 ವಿಕೆಟ್ ಪಡೆದ ಡ್ವೇಯ್ನಾ ಸ್ಮಿತ್, ಡ್ವೇಯ್ನಿ ಬ್ರಾವೊ, ಧವಳ್ ಕುಲಕರ್ಣಿ ಹಾಗೂ ಪ್ರವೀಣ್ ಕುಮಾರ್ ಸಂಘಟಿತ ದಾಳಿಯ ಹೊರತಾಗಿಯೂ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಮುಂಬೈ ಇನಿಂಗ್ಸ್‌ನ 4ನೆ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮ(30) ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಕಳೆದ ಪಂದ್ಯದ ಹೀರೋ ಸ್ಮಿತ್ ಅವರು ಮಾರ್ಟಿನ್ ಗಪ್ಟಿಲ್ ಹಾಗೂ ಕ್ರುನಾಲ್ ಪಾಂಡೆಯನ್ನು ಒಂದೇ ಓವರ್‌ನಲ್ಲಿ ಔಟ್ ಮಾಡಿದಾಗ ಮುಂಬೈನ ಸ್ಕೋರ್ 3 ವಿಕೆಟ್‌ಗೆ 45 ರನ್ ಆಗಿತ್ತು.

4ನೆ ವಿಕೆಟ್‌ಗೆ 75 ರನ್ ಜೊತೆಯಾಟ ನಡೆಸಿದ ರಾಣಾ ಹಾಗೂ ಬಟ್ಲರ್ ಮುಂಬೈಗೆ ಆಸರೆಯಾದರು. ಬಟ್ಲರ್ ನೀಡಿದ ಸೂಪರ್ ರಿಟರ್ನ್ ಕ್ಯಾಚ್ ಪಡೆದ ಬ್ರಾವೊ ಗುಜರಾತ್‌ಗೆ ಮೇಲುಗೈ ತಂದುಕೊಟ್ಟರು.

3ನೆ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ರಾಣಾ(70,36 ಎಸೆತ, 7 ಬೌಂಡರಿ, 4 ಸಿಕ್ಸರ್) ಬ್ರಾವೊಗೆ ವಿಕೆಟ್ ಒಪ್ಪಿಸಿದರು. ಮುಂಬೈ ಅಂತಿಮ 4 ಓವರ್‌ಗಳಲ್ಲಿ 27 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಗುಜರಾತ್ ಬೌಲರ್‌ಗಳು ಮುಂಬೈಯನ್ನು 8 ವಿಕೆಟ್‌ಗೆ 172 ರನ್‌ಗೆ ನಿಯಂತ್ರಿಸಿದರು.

ಮುಂಬೈ ಇಂಡಿಯನ್ಸ್:

20 ಓವರ್‌ಗಳಲ್ಲಿ 172/8

 ರೋಹಿತ್ ಶರ್ಮ ಸಿ ಜಕಾತಿ ಬಿ ಕುಲಕರ್ಣಿ 30

ಗಪ್ಟಿಲ್ ಸಿ ಬ್ರಾವೊ ಬಿ ಸ್ಮಿತ್ 07

ನಿತೀಶ್ ರಾಣಾ ಸಿ ಕುಲಕರ್ಣಿ ಬಿ ಬ್ರಾವೊ 70

ಕೃನಾಲ್ ಪಾಂಡ್ಯ ಸಿ ಫಿಂಚ್ ಬಿ ಸ್ಮಿತ್ 04

ಬಟ್ಲರ್ ಸಿ ಮತ್ತು ಬಿ ಬ್ರಾವೊ 33

ಪೊಲಾರ್ಡ್ ಸಿ ಸ್ಮಿತ್ ಬಿ ಕುಲಕರ್ಣಿ 09

 ಹಾರ್ದಿಕ್ ಪಾಂಡ್ಯ ಸಿ ಜಡೇಜ ಬಿ ಕುಮಾರ್ 07

ಹರ್ಭಜನ್ ಸಿ ರೈನಾ ಬಿ ಕುಮಾರ್ 03

ವಿನಯ್‌ಕುಮಾರ್ ಔಟಾಗದೆ 01

ಇತರ 08

ವಿಕೆಟ್ ಪತನ: 1-33, 2-41, 3-45, 4-120, 5-153, 6-160, 7-166, 8-172.

ಬೌಲಿಂಗ್ ವಿವರ:

ಪ್ರವೀಣ್ ಕುಮಾರ್ 4-0-24-2

ಕುಲಕರ್ಣಿ 4-0-41-2

ಡ್ವೇಯ್ನ ಸ್ಮಿತ್ 4-0-37-2

ಜಕಾತಿ 3-0-30-0

ಬ್ರಾವೊ 4-0-22-2

ಜಡೇಜ 1-0-15-0

ಗುಜರಾತ್ ಲಯನ್ಸ್

17.5 ಓವರ್‌ಗಳಲ್ಲಿ 173/4

ಫಿಂಚ್ ಎಲ್ಬಿಡಬ್ಲ್ಯು ವಿನಯಕುಮಾರ್ 00

ಮೆಕಲಮ್ ಬಿ ಹರ್ಭಜನ್ 48

ಸುರೇಶ್ ರೈನಾ ಸಿ ಬಟ್ಲರ್ ಬಿ ಬುಮ್ರಾ 58

ದಿನೇಶ್ ಕಾರ್ತಿಕ್ ಸಿ ಬಟ್ಲರ್ ಬಿ ವಿನಯಕುಮಾರ್ 03

ಸ್ಮಿತ್ ಔಟಾಗದೆ 37

ಜಡೇಜ ಔಟಾಗದೆ 21

ಇತರ 6

ವಿಕೆಟ್ ಪತನ: 1-0, 2-96, 3-111, 4-122

ಬೌಲಿಂಗ್ ವಿವರ:

ವಿನಯಕುಮಾರ್ 3-1-17-2

ಬುಮ್ರಾ 4-0-42-1

ಮೆಕ್ಲಿನಘನ್ 3.5-0-38-0

ಕೃನಾಲ್ ಪಾಂಡ್ಯ 2-0-28-0

ಹರ್ಭಜನ್ 4-0-36-1

ಹಾರ್ದಿಕ್ ಪಾಂಡ್ಯ 1-0-10-0

ಪಂದ್ಯಶ್ರೇಷ್ಠ: ಸುರೇಶ್ ರೈನಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News