×
Ad

ಆಯಿಶಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ವೇನ್ ಪರ್ನೆಲ್

Update: 2016-05-22 19:37 IST

ಕೇಪ್‌ಟೌನ್, ಮೇ 22: ದಕ್ಷಿಣ ಆಫ್ರಿಕದ ವೇಗದ ಬೌಲರ್ ವೇನ್ ಪರ್ನೆಲ್ ಅವರು ಫ್ಯಾಷನ್ ಬ್ಲಾಗರ್‌ ಆಯಿಷಾ ಬಕೆರ್ ಜೊತೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೇಪ್‌ಟೌನ್‌ನ ಮಸೀದಿಯೊಂದರಲ್ಲಿ ಅವರ ವಿವಾಹ ನಡೆಯಿತು.ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌  ಆಗಿದೆ. 26ರ ಹರೆಯದ ವೇಗದ ಬೌಲರ್ 2011ರಲ್ಲಿ ಇಸ್ಲಾಂಗೆ ಮತಾಂತರಗೊಂಡಿದ್ದರು. ಕೇಪ್‌ಟೌನ್‌ನ 6ನೆ ಜಿಲ್ಲೆಯ ಝೀನತುಲ್ ಇಸ್ಲಾಂ ಮಸೀದಿಯಲ್ಲಿ ನಡೆದ ಅವರ ವಿವಾಹ ಸಮಾರಂಭದಲ್ಲಿ ಸುಮಾರು 400 ಮುಖ್ಯ ಅತಿಥಿಗಳು ಭಾಗವಹಿಸಿದ್ದರು.

 ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ವೇನ್ ಪರ್ನೆಲ್ ತನ್ನ ಹೆಸರನ್ನು ವಲೀದ್ ಎಂದು ಬದಲಾಯಿಸಿಕೊಂಡಿದ್ದಾರೆ.

ವೆಸ್ಟ್‌ಇಂಡೀಸ್‌ಗೆ ಪ್ರವಾಸ ತೆರಳಲಿರುವ ಮೊದಲು  ಪರ್ನೆಲ್ ಕೇವಲ ಮೂರು ದಿನಗಳ ಕಾಲ ಕುಟುಂಬದೊಂದಿಗೆ ಇರುತ್ತಾರೆ  ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News