ನಿವೃತ್ತಿ ವರದಿ ತಳ್ಳಿ ಹಾಕಿದ ವಿಶ್ವನಾಥನ್ ಆನಂದ್
Update: 2016-05-22 23:09 IST
ಚೆನ್ನೈ,ಮೇ 22: ತಾನು ನಿವೃತ್ತಿಯಾಗುತ್ತೇನೆಂಬ ವರದಿಯನ್ನು ತಳ್ಳಿ ಹಾಕಿರುವ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ 2018ರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಮೆಂಟ್‌ಗೆ ಅರ್ಹತೆ ಗಿಟ್ಟಿಸುವ ಗುರಿ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ.
ನಿವೃತ್ತಿ ಯಾವಾಗ ಎಂಬ ಪ್ರಶ್ನೆಯನ್ನು ತುಂಬಾ ಜನರು ಕೇಳಿದ್ದಾರೆ. ಇದೀಗ ನಾನು ಯಾಕೆ ನಿವೃತ್ತಿಯಾಗಬೇಕೆಂದು ಗೊತ್ತಿಲ್ಲ. ನಿವೃತ್ತಿಗೆ ಕಾರಣವೂ ಸಿಗುತ್ತಿಲ್ಲ. ಬ್ರುಸೆಲ್ಸ್, ಸೈಂಟ್ ಲೌಯಿಸ್, ಲಂಡನ್ ಹಾಗೂ ಇತರ ದೊಡ್ಡ ನಗರಗಳಲ್ಲಿ ನಡೆಯುವ ಗ್ರಾಂಡ್ ಚೆಸ್ ಟೂರ್ನಿಯ ಕಡೆಗೆ ಗಮನ ಹರಿಸುವುದು ನನ್ನ ಸದ್ಯದ ಯೋಜನೆ. ಮಾ.2018ರಲ್ಲಿ ನಡೆಯಲಿರುವ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಗೆ ಅರ್ಹತೆ ಪಡೆಯುವುದು ನನ್ನ ಮುಖ್ಯ ಗುರಿಯಾಗಿದೆ ಎಂದು ಆನಂದ್ ತಿಳಿಸಿದರು.