×
Ad

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಪೂಜಾಗೆ ಮಾರ್ಷಲ್ ಪಂಚ್

Update: 2016-05-22 23:57 IST

ಅಸ್ತಾನಾ, ಮೇ 22: ಎಐಬಿಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪೂಜಾ ರಾಣಿ(75 ಕೆಜಿ) ಎರಡನೆ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆಯುವುದರೊಂದಿಗೆ ಭಾರತದ ಮಹಿಳಾ ಬಾಕ್ಸರ್‌ಗಳು ಒಲಿಂಪಿಕ್ಸ್‌ನಲ್ಲಿ ಒಂದೂ ಸ್ಥಾನವನ್ನು ಗಿಟ್ಟಿಸಿಕೊಳ್ಳದೇ ಭಾರೀ ನಿರಾಸೆಗೊಳಿಸಿದರು.

ರವಿವಾರ ಇಲ್ಲಿ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ 2012ರ ವಿಶ್ವ ಚಾಂಪಿಯನ್ ಸವನ್ನಾ ಮಾರ್ಷಲ್‌ರನ್ನು ಎದುರಿಸಿದ ಪೂಜಾ 0-3 ಅಂತರದಿಂದ ಸೋತಿದ್ದಾರೆ.

ಏಕಪಕ್ಷೀಯ ಪಂದ್ಯದಲ್ಲಿ ಪೂಜಾ ಸೋಲುವುದರೊಂದಿಗೆ ಭಾರತದ ಬಾಕ್ಸರ್‌ಗಳ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವ ಕನಸು ಸಂಪೂರ್ಣ ಭಗ್ನಗೊಂಡಂತಾಗಿದೆ.

ಶನಿವಾರ ನಡೆದಿದ್ದ ಎರಡನೆ ಸುತ್ತಿನ ಪಂದ್ಯದಲ್ಲಿ ಒಲಿಂಪಿಕ್ಸ್ ಆಕಾಂಕ್ಷಿ ಮೇರಿ ಕೋಮ್ ಹಾಗೂ ಸರಿತಾದೇವಿ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದರು. ಈ ಇಬ್ಬರು ಬಾಕ್ಸರ್‌ಗಳ ಒಲಿಂಪಿಕ್ಸ್ ಕನಸು ಭಗ್ನಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News