ಆಸ್ಟ್ರೇಲಿಯ ಪ್ರವಾಸ: ಭಾರತದ ಮಹಿಳಾ ಹಾಕಿ ತಂಡಕ್ಕೆ ಸುಶೀಲಾ ಸಾರಥ್ಯ

Update: 2016-05-23 17:44 GMT

ಹೊಸದಿಲ್ಲಿ, ಮೇ 23: ಆಸ್ಟ್ರೇಲಿಯದ ಡಾರ್ವಿನ್‌ನಲ್ಲಿ ಮೇ 30 ರಿಂದ ಆರಂಭವಾಗಲಿರುವ ನಾಲ್ಕು ದೇಶಗಳ ಟೂರ್ನಮೆಂಟ್‌ನಲ್ಲಿ ಡಿಫೆಂಡರ್ ಸುಶೀಲಾ ಚಾನು 17 ಸದಸ್ಯೆಯರಿರುವ ಭಾರತೀಯ ಮಹಿಳಾ ಹಾಕಿ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.

ಈ ಟೂರ್ನಿಯು ರಿಯೋ ಒಲಿಂಪಿಕ್ಸ್‌ಗೆ ಪೂರ್ವ ತಯಾರಿಯಾಗಿದೆ. ಟೂರ್ನಿಯಲ್ಲಿ ವಿಶ್ವದ ನಂ.3ನೆ ತಂಡ ಆಸ್ಟ್ರೇಲಿಯ, ನಾಲ್ಕನೆ ರ್ಯಾಂಕಿನಲ್ಲಿರುವ ನ್ಯೂಝಿಲೆಂಡ್ ಹಾಗೂ ವಿಶ್ವದ ನಂ.10ನೆ ತಂಡ ಜಪಾನ್ ಭಾಗವಹಿಸಲಿವೆ.

ಖಾಯಂ ನಾಯಕಿ ರಿತು ರಾಣಿಗೆ ವಿಶ್ರಾಂತಿ ನೀಡಲಾಗಿದ್ದು, ಸುಶೀಲಾರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ದೀಪಿಕಾ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ತಂಡದಲ್ಲಿ ಹಿರಿಯ ಆಟಗಾರ್ತಿಯರಾದ ಪೂನಂ ರಾಣಿ ಹಾಗೂ ವಂದನಾ ಕಟಾರಿಯಾ ಅವರಿದ್ದಾರೆ. ಯುವ ಆಟಗಾರ್ತಿಯರಾದ ನಿಕ್ಕಿ ಪ್ರಧಾನ್ ಹಾಗೂ ಮಿಡ್‌ಫೀಲ್ಡರ್ ಪ್ರೀತಿ ದುಬೆ ತಂಡದಲ್ಲಿ ಸ್ಥಾ ಪಡೆದಿದ್ದಾರೆ. ಪ್ರೀತಿ ದುಬೆ ವರ್ಷಾರಂಭದಲ್ಲಿ ನಡೆದ ಹಾಕಿ ಇಂಡಿಯಾದ ಎರಡನೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಸಂತಾ ಲಾಕ್ರ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಜಯಿಸಿದ್ದರು.

ಆಸ್ಟ್ರೇಲಿಯ ಪ್ರವಾಸಕ್ಕೆ ಕೈಗೊಳ್ಳಲಿರುವ ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವುದು ಮಹಾ ಗೌರವ. ನಾವು ಈಗಾಗಲೇ ಹಾಕ್‌ಬೇ ಕಪ್‌ನಲ್ಲಿ ಜಪಾನ್ ಹಾಗೂ ನ್ಯೂಝಿಲೆಂಡ್ ತಂಡವನ್ನು ಎದುರಿಸಿದ್ದೇವೆ. ಜಪಾನ್ ಹಾಗೂ ಆಸ್ಟ್ರೇಲಿಯದಲ್ಲಿ ಉತ್ತಮ ಪ್ರದರ್ಶನ ನೀಡುವುದು ನಮ್ಮ ಮುಖ್ಯ ಗುರಿ. ಒಲಿಂಪಿಕ್ಸ್‌ನಲ್ಲಿ ಈ ಎರಡು ತಂಡಗಳು ನಾವಿರುವ ಗುಂಪಿನಲ್ಲೇ ಸ್ಥಾನ ಪಡೆದಿವೆ ಎಂದು ಸುಶೀಲಾ ಪ್ರತಿಕ್ರಿಯಿಸಿದ್ದಾರೆ.

ತಂಡ:

ಗೋಲ್‌ಕೀಪರ್‌ಗಳು: ಸವಿತಾ, ರಜನಿ ಡಿಫೆಂಡರ್‌ಗಳು: ದೀಪಿಕಾ(ಉಪನಾಯಕಿ), ಸುನೀತಾ ಲಾಕ್ರ, ನಿಕ್ಕಿ ಪ್ರಧಾನ್, ಸುಶೀಲಾ ಚಾನು(ನಾಯಕಿ), ನಿಯಾಲುಮ್ ಲಾಲ್.

ಮಿಡ್ ಫೀಲ್ಡರ್‌ಗಳು: ರಾಣಿ, ನಮಿತಾ ಟಾಪ್ಪೊ, ನವಜೋತ್ ಕೌರ್, ಮೊನಿಕಾ ಪ್ರೀತಿ ದುಬೆ, ರೇಣುಕಾ ಯಾದವ್.

ಫಾರ್ವರ್ಡ್‌ಗಳು: ಪೂನಂ ರಾಣಿ, ವಂದನಾ ಕಟಾರಿಯಾ, ಅನುರಾಧ ದೇವಿ, ಲಿಲಿಮಾ ಮಿಂಝ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News