×
Ad

ಆಟಗಾರರು ಕಡಿಮೆ ಶಿಕ್ಷಣ ಪಡೆದಿರುವುದೇ ಪಾಕಿಸ್ತಾನ ಕ್ರಿಕೆಟ್ ತಂಡದ ಸೋಲಿಗೆ ಕಾರಣ: ಶರ್ಹಿಯಾರ್ ಖಾನ್

Update: 2016-05-25 22:17 IST

ಕರಾಚಿ,ಮೇ 25: ವಿದ್ಯಾಭ್ಯಾಸದ ಯೋಗ್ಯತೆ ಮತ್ತು ಕ್ರಿಕೆಟ್‌ನ ಸೋಲಿಗೆ ಪರಸ್ಪರ ಸಂಬಂಧವಿದೆಯೆಂದು ಪಾಕಿಸ್ತಾನದ ಕ್ರಿಕೆಟ್ ಬೋರ್ಡ್(ಪಿಸಿಬಿ)ಚೇರ್‌ಮೆನ್ ಶರ್ಹಿಯಾರ್‌ಖಾನ್ ಹೇಳಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಪಾಕಿಸ್ತಾನ ತಂಡದ ಸೋಲಿಗೆ ಕಾರಣ ಕ್ರಿಕೆಟ್ ಆಟಗಾರರ ಕಡಿಮೆ ವಿದ್ಯಾಭ್ಯಾಸವಾಗಿದೆ ಎಂದು ಶರ್ಹಿಯಾರ್ ಖಾನ್ ನೀಡಿರುವ ಹೇಳಿಕೆ ವಿವಾದವಾಗಿದೆ. ಈಗಿನ ಸ್ಟಾರ್ ಆಟಗಾರರುಮತ್ತು ಮಾಜಿ ಆಟಗಾರರು ಶರ್ಹಿಯಾರ್ ಖಾನ್ ವಿರುದ್ಧ ರಂಗಪ್ರವೇಶಿಸಿದ್ದಾರೆ. ಕ್ರಿಕೆಟ್ ಪೂರ್ಣ ವಿದ್ಯಾಭ್ಯಾಸವಾಗಿದೆ ಎಂದು ಹಿರಿಯ ಬ್ಯಾಟ್ಸ್‌ಮನ್ ಮುಹಮ್ಮದ್ ಹಫೀರ್ ಹೇಳಿದ್ದಾರೆ.ಟೆಸ್ಟ್ ಕ್ರಿಕೆಟರ್ ಆಗಿದ್ದಕ್ಕೆ ಹೆಮ್ಮೆಪಡುತ್ತಿದ್ದೇನೆ ಅದುವೇ ತನ್ನ ಪದವಿಯಾಗಿದೆ ಎಂದು ಹಫೀರ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ವಿದ್ಯಾಭ್ಯಾಸ ಅತ್ಯಾವಶ್ಯ ಆದರೂ ಪದವಿ ಗಳಿಸುವುದು ಜೀವನದಲ್ಲಿ ಅತ್ಯಾವಶ್ಯಕವಲ್ಲ ಎಂದು ಹಫೀರ್ ಹೇಳಿದ್ದಾರೆ.

ಕಳೆದ ದಿವಸ ಕ್ವೆಟ್ಟಾದಲ್ಲಿ ಶರ್ಹಿಯಾರ್ ಖಾನ್ ಕ್ರಿಕೆಟ್ ಆಟಗಾರರ ವಿದ್ಯಾಭ್ಯಾಸ ಯೋಗ್ಯತೆಯ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ಮಿಸ್ಬಾಹುಲ್ ಹಕ್ ಹೊರತು ಯಾರಿಗೂ ಪದವಿ ಕೂಡ ಇಲ್ಲ ಎಂದು ಅವರು ಹೇಳಿದ್ದರು. ಭವಿಷ್ಯದಲ್ಲಿ ಗೆಲುವು ಸಿಗಲು ಶಿಕ್ಷಣ ಪಡೆದ ಆಟಗಾರರು ಬೇಕಾಗಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News